ಉಪ್ಪಿನಂಗಡಿ: ಕಾರಿನಲ್ಲಿ ಶಾಲೆಗೆ ಕರೆದೊಯ್ಯುವ ಆಮಿಷವೊಡ್ಡಿ ಅಪ್ರಾಪ್ತೆಯ ಅತ್ಯಾಚಾರ!
Wednesday, June 8, 2022
ಮಂಗಳೂರು: ಕಾರಿನಲ್ಲಿ ಶಾಲೆಗೆ ಕರೆದೊಯ್ಯುತ್ತೇನೆಂದು ಅಪ್ರಾಪ್ತೆಯನ್ನು ಪುಸಲಾಯಿಸಿ ಬಳಿಕ ಲಾಡ್ಜ್ ಗೆ ಕರೆದೊಯ್ದು ಕಾಮುಕನೋರ್ವನು ಅತ್ಯಾಚಾರ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿಯ ಕರಾಯ ಗ್ರಾಮದ ಮುನಾಸೀರ್ ಅತ್ಯಾಚಾರಗೈದ ಕಾಮುಕ.
ಮುನಾಸೀರ್ ಅಪ್ರಾಪ್ತ ಬಾಲಕಿಯ ನೆರೆಮನೆಯವನಾಗಿದ್ದ. ಈತ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಮೇ 30ರಂದು ಬಾಲಕಿಯನ್ನು ಶಾಲೆಗೆ ಕರೆದೊಯ್ದು ಬಿಡುವುದಾಗಿ ಪುಸಲಾಯಿಸಿದ್ದಾನೆ. ಬಳಿಕ ಹಾಗೆ ಮಾಡದೆ. ಬಾಲಕಿಯನ್ನು ಲಾಡ್ಜೊಂದಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಅಲ್ಲದೆ ಮಂಗಳವಾರ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಉಪ್ಪಿನಂಗಡಿ ಲಾಡ್ಜ್ ನಲ್ಲಿ ಮತ್ತೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.