ಶೇರು ಪೇಟೆಗೆ ಮರ್ಮಾಘಾತ: 2020ರ ಬಳಿಕ ಮೊದಲ ಬಾರಿ ಪ್ರಪಾತದ ಕುಸಿತ, ಹೂಡಿಕೆದಾರ ಕಂಗಾಲು
ಶೇರು ಪೇಟೆಗೆ ಮರ್ಮಾಘಾತ: 2020ರ ಬಳಿಕ ಮೊದಲ ಬಾರಿ ಪ್ರಪಾತದ ಕುಸಿತ, ಹೂಡಿಕೆದಾರ ಕಂಗಾಲು
ಜೂನ್ ಎರಡನೇ ವಾರದ ಇಡೀ ವರ್ಷದಲ್ಲೇ ಶೇರು ಮಾರುಕಟ್ಟೆಗೆ ಅತ್ಯಂತ ಕೆಟ್ಟ ದಿನವಾಗಿ ಪರಿಣಮಿಸಿದೆ. ವಾರಾಂತ್ಯದ ಕೊನೆಯ ವಹಿವಾಟಿನ ಅಂತ್ಯದಲ್ಲೂ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ವಾರದಲ್ಲಿ ಸತತ ಆರನೇ ದಿನವೂ ವಹಿವಾಟಿನ ಅಂತ್ಯಕ್ಕೆ ಷೇರು ಮಾರುಕಟ್ಟೆ ನಷ್ಟ ಕಂಡಿದೆ.
ಮಾರ್ಚ್ 2020ರ ಬಳಿಕ ಶೇರು ಮಾರುಕಟ್ಟೆ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. 2020ರ ಮಾರ್ಚ್‌ನಲ್ಲಿ ಕೊರೊನಾ ಬರಸಿಡಿಲಿನ ಸುದ್ದಿಯಿಂದ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿತ್ತು. ಆ ಬಳಿಕ, ಈ ವಾರ ಅದೇ ಮಾದರಿಯ ಪ್ರಪಾತದ ಇಳಿಮುಖ ಕಂಡಿದ್ದು, ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಭಾರೀ ನಷ್ಟ ಅನುಭವಿಸಿದ್ದಾರೆ.
-ಸೆನ್ಸೆಕ್ಸ್ ಸುಮಾರು 135.57 ಅಂಕ ಅಥವಾ ಶೇಕಡ 0.26ರಷ್ಟು ಕೆಳಕ್ಕೆ ಇಳಿದು 51,360.42ರಲ್ಲಿ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ ಶೇಕಡ 0.44ರಷ್ಟು ಕುಸಿದು 15,293.50ಕ್ಕೆ ಸ್ಥಿರವಾಗಿದೆ. ಟೈಟಾನ್, ವಿಪ್ರೋ ಭಾರೀ ನಷ್ಟವನ್ನು ಕಂಡಿದೆ.
ಯಾವ ಷೇರಿಗೆ ನಷ್ಟ, ಯಾವ ಷೇರಿಗೆ ಲಾಭ
ಟೈಟಾನ್, ವಿಪ್ರೋ, ಡಾ ರೆಡ್ಡೀಸ್, ಏಷ್ಯನ್ ಪೈಂಟ್ಸ್, ಸನ್ ಫಾರ್ಮಾ, ಪವರ್ ಗ್ರಿಡ್, ಲಾರ್ಸೆನ್ & ಟ್ಯೂಬ್ರೋ, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ, ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್ ಭಾರೀ ನಷ್ಟ ಅನುಭವಿಸಿದೆ.
ನಿಫ್ಟಿಯಲ್ಲಿ ಟೈಟಾನ್ ಭಾರೀ ಕೆಳಕ್ಕೆ ಕುಸಿದಿದೆ. ಟೈಟಾನ್ ಶೇಕಡ ಆರರಷ್ಟು ಕೆಳಕ್ಕೆ ಇಳಿಯುವ ಮೂಲಕ ಷೇರು ಪೇಟೆಯಲ್ಲಿ ಎರಡು ವರ್ಷದಲ್ಲೇ ಅತೀ ಕೆಟ್ಟ ದಿನವನ್ನು ಕಂಡಿದೆ. 30 ಶೇರುಗಳ ಪೈಕಿ ಕೇವಲ 9 ಷೇರುಗಳು ಮಾತ್ರ ಲಾಭ ಮಾಡಿದೆ. ಉಳಿದ ಎಲ್ಲವೂ ನೆಲಕಚ್ಚಿದೆ.
ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ರಿಲೆಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಲಾಭ ಕಂಡಿದೆ. ರಿಲೆಯನ್ಸ್ ಶೇರು ಶೇಕಡ 1.2 ಜಿಗಿತ ಕಂಡು ವಹಿವಾಟು ಕೊನೆಗೊಳಿಸಿದೆ. ಆದರೆ, ಸಕ್ಕರೆ ಉತ್ಪಾದಕರ ಶೇರುಗಳು ಒಂದರಿಂದ ಆರು ಶೇಕಡದಷ್ಟು ಕೆಳಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ಸಕ್ಕರೆ ರಫ್ತು ನಿಷೇಧಿಸುವ ಸಾಧ್ಯತೆ ಹಿನ್ನೆಲೆ ಹೂಡಿಕೆದಾರರು ಸಕ್ಕರೆ ಷೇರಿನಿಂದ ಹಿಂದಕ್ಕೆ ಸರಿದಿದ್ದಾರೆ.
US ಫೆಡರಲ್ 1994ರ ಬಳಿಕ ಮೊದಲ ಬಾರಿಗೆ ಬಡ್ಡಿದರವನ್ನು ಭಾರೀ ಹೆಚ್ಚಳ ಮಾಡಿದೆ. ಇದರ ಪರಿಣಾಮ ಷೇರು ಪೇಟೆಯ ಮೇಲೆ ಬಿದ್ದಿದೆ. ಹಣದುಬ್ಬರ, ಉಕ್ರೇನ್-ರಷ್ಯಾ ಯುದ್ಧವು ಕೂಡಾ ಷೇರು ಪೇಟೆಯ ಮೇಲೆ ಪರಿಣಾಮ ಉಂಟು ಮಾಡಿದೆ.