![ಶಾರದಾ ವಿದ್ಯಾ ನಿಕೇತನದ ಬೇಜವಾಬ್ದಾರಿಯಿಂದ ಬಾಲಕ ಆತ್ಮಹತ್ಯೆ: ವ್ಯಾಪಕ ಖಂಡನೆ ಶಾರದಾ ವಿದ್ಯಾ ನಿಕೇತನದ ಬೇಜವಾಬ್ದಾರಿಯಿಂದ ಬಾಲಕ ಆತ್ಮಹತ್ಯೆ: ವ್ಯಾಪಕ ಖಂಡನೆ](https://blogger.googleusercontent.com/img/b/R29vZ2xl/AVvXsEgC431lQLlnjtX_8NwXEtnY_KLA3L3xLlqCfRwjFf2hths9NntRg7KcjWtlF_Rpzzgcwd6kEq4AGpGVIbag10evWlOxK4GbfLALqKAnn4so3Ot9oJpKRpjtiditi8SCJbYRrVcvj5hKwgW1mrmOW2ZTC14QpWP9UXBJTBF6KoraEVwhSUTzpLvtRpHt/w640-h356/suicide.jpg)
ಶಾರದಾ ವಿದ್ಯಾ ನಿಕೇತನದ ಬೇಜವಾಬ್ದಾರಿಯಿಂದ ಬಾಲಕ ಆತ್ಮಹತ್ಯೆ: ವ್ಯಾಪಕ ಖಂಡನೆ
ಶಾರದಾ ವಿದ್ಯಾ ನಿಕೇತನದ ಬೇಜವಾಬ್ದಾರಿಯಿಂದ ಬಾಲಕ ಆತ್ಮಹತ್ಯೆ: ವ್ಯಾಪಕ ಖಂಡನೆ
ತಲಪಾಡಿಯ ಶಾರದಾ ವಿದ್ಯಾ ನಿಕೇತನಾ ವಿದ್ಯಾಸಂಸ್ಥೆಯ ಬೇಜವಾಬ್ದಾರಿಯಿಂದ ಬೆಂಗಳೂರು ಮೂಲದ ವಿದ್ಯಾರ್ಥಿಯಿಂದ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿದ್ದು, ಇದಕ್ಕೆ ಶಿಕ್ಷಣ ಸಂಸ್ಥೆಯೇ ಹೊಣೆ ಎಂದು NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡನೆ ವ್ಯಕ್ತಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಯಾವುದೇ ರೀತಿಯ ಸೂಕ್ತ ಕ್ರಮಗೊಳ್ಳದಿರುವುದು ಖಂಡನೀಯ ಎಂದು ಎನ್‌ಎಸ್‌ಯುಐ ಹೇಳಿದೆ.
ತನ್ನ ತಾಯಿಯ ಜನ್ಮದಿನದಂದು ಶುಭ ಹಾರೈಸಲು ವಾರ್ಡನ್ ಮೊಬೈಲ್ ಫೋನ್ ನೀಡಲಿಲ್ಲ ಎಂದು ಮನನೊಂದು ತಲಪಾಡಿಯ ಶಾರದಾ ವಿದ್ಯಾನಿಕೇತನಾ ಖಾಸಗಿ ವಿದ್ಯಾಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿ ಬೆಂಗಳೂರು ಮೂಲದ ಪೂರ್ವಜ್ (14) ಎಂಬ ಅಪ್ರಾಪ್ತ ಬಾಲಕನೊಬ್ಬ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಾಸ್ಟೆಲ್ ನಲ್ಲಿ ನಿಯಮಾವಳಿ ಪ್ರಕಾರ ವಾರ್ಡನ್ ಮೊಬೈಲ್ ನೀಡಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡಿದ್ದಾನೆ.
ತುರ್ತು ಅವಶ್ಯಕತೆಯಿರುವ ಸಂದರ್ಭದಲ್ಲಿ ವಾರ್ಡನ್ ವಿದ್ಯಾರ್ಥಿಗೆ ಪೋಷಕರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕಿತ್ತು. ಇದರಿಂದ ಅಪ್ರಾಪ್ತ ವಯಸ್ಸಿನ ಬಾಲಕ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ವಿದ್ಯಾಸಂಸ್ಥೆಯೇ ನೇರ ಹೊಣೆ ಎಂದು ಎನ್‌ಎಸ್‌ಯುಐ ಆರೋಪಿಸಿದೆ.
ತಾಯಿಯ ಬರ್ತ್‌ಡೇ ವಿಶ್ ಮಾಡಲು ಅವಕಾಶ ನೀಡದ ವಾರ್ಡನ್: ಬಾಲಕ ಆತ್ಮಹತ್ಯೆ!
ಜಿಲ್ಲಾಡಳಿತ ಹಾಗೂ ಸರ್ಕಾರವು ಖಾಸಗಿ ವಿದ್ಯಾಸಂಸ್ಥೆಗಳ ಕಟ್ಟುನಿಟ್ಟಾದ ನಿಯಮಗಳಿಗೆ ಬ್ರೇಕ್ ಹಾಕಬೇಕಾಗಿದೆ, ಹಾಗೂ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣರಾದವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.