
Subrahmanya :- ಧಾರಕಾರ ಮಳೆ; ಕೃಷಿ ತೋಟ, ರಸ್ತೆಗಳಿಗೆ ನುಗ್ಗಿದ ಕೃತಕ ನೆರೆ ನೀರು.
Saturday, June 18, 2022
ಸುಳ್ಯ
ಸುಳ್ಯ, ಕಡಬ, ಸುಬ್ರಹ್ಮಣ್ಯ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಬಳಿಕ ಧಾರಕಾರ ಮಳೆಯಾಯಿತು. ರಾತ್ರೀ ವೇಳೆ ಈ ಭಾಗಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗಿದೆ.
ಸುಳ್ಯ ನಗರ, ಜಾಲ್ಸೂರು, ಕನಕಮಜಲು, ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಕಲ್ಲುಗುಂಡಿ, ಸಂಪಾಜೆ, ಅರಂತೋಡು, ಗುತ್ತಿಗಾರು, ಸೋಣಂಗೇರಿ, ಐವರ್ನಾಡು, ಬೆಳ್ಳಾರೆ, ಕಲ್ಮಡ್ಕ, ಎಡಮಂಗಲ, ಪಂಜ, ಮುರುಳ್ಯ, ಬಳ್ಪ, ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಿಳಿನೆಲೆ, ಕಡಬದ ಕಲ್ಲುಗುಡ್ಡೆ, ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಡಿಂಬಾಳ, ಕೊಣಾಜೆ ಭಾಗದಲ್ಲೂ ಭಾರೀ ಮಳೆಯಾಗಿದೆ.
ತೋಟಕ್ಕೆ, ರಸ್ತೆಗಳಿಗೆ ನುಗ್ಗಿದ ನೀರು
ಸಂಜೆ ಸುರಿದ ಬಾರೀ ಮಳೆಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿ ಭಾಗದಲ್ಲಿ, ಕೊಡಿಂಬಾಳ, ಸೇರಿದಂತೆ ಹಲವು ಕಡೆಗಳಲ್ಲಿ ಚರಂಡಿ ನಿರ್ವಹಣೆ ಮಾಡದೇ ರಸ್ತೆಗಳಿಗೆ ಹಾಗೂ ಸಣ್ಣ ತೋಡುಗಳಲ್ಲಿ ಬಾರೀ ನೀರು ಬಂದು ಗದ್ದೆ, ಅಡಿಕೆ ತೋಟಕ್ಕೆ ನುಗ್ಗಿದ ಘಟನೆ ಸಂಭವಿಸಿದೆ. ತೋಟ, ಗದ್ದೆ ಸಂಪೂರ್ಣ ಜಲಾವೃತಗೊಂಡಿತ್ತು.