Sulya :-ಸುಳ್ಯದಲ್ಲಿ ಹಲವೆಡೆ ಭೂಕಂಪ ಅನುಭವ.. ಆತಂಕದಲ್ಲಿ ಜನತೆ. ಆತಂಕದ ಅಗತ್ಯ ಇಲ್ಲ ಅಧಿಕಾರಿಗಳ ಸ್ಪಷ್ಟನೆ..
Saturday, June 25, 2022
ಸುಳ್ಯ
ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಮರ್ಕಂಜ , ಕೊಡಪ್ಪಾಲ, ಗೂನಡ್ಕ , ಅರಂತೋಡು ಮೊದಲಾದ ಕಡೆಗಳಲ್ಲಿ ಬೆಳಗ್ಗೆ 9.10 ರಿಂದ 9.15 ರ ಆಸುಪಾಸಿನಲ್ಲಿ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ. ತಾಲೂಕಿನ ಹಲವೆಡೆಗಳಿಂದ ಜನರು ಕಂಪನದ ಅನುಭವ ಹೇಳಿಕೊಳ್ಳುತ್ತಿದ್ದಾರೆ. ಸುಳ್ಯದ ಸಂಪಾಜೆ ಕಡೆಗಳಲ್ಲಿ ಕಪಾಟಿನಲ್ಲಿದ್ದ ಪಾತ್ರೆಗಳು ಕೆಳಕ್ಕೆ ಬಿದ್ದಿದ್ದು, ಮನೆಯ ಗೋಡೆ ಸ್ವಲ್ಪ ಬಿರುಕುಬಿಟ್ಟಿದೆ ಮತ್ತು ಮನೆಯ ಡಬ್ಬಿ ಶೀಟ್‌ಗಳು, ಅಂಗಡಿಯಲ್ಲಿದ್ದ ಭರಣಿಗಳು ಅದುರಿತು ಎಂಬ ಅನುಭವ ಆದರೆ ಸುಳ್ಯದ ತೋಡಿಕಾನದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ವೇಳೆ ಮರ ಅದುರಿದ ಅನುಭವವಾಯಿತೆಂದು ಹೇಳಲಾಗಿದೆ.
ಭೂಕಂಪ ಮತ್ತು ಅದರ ತೀವ್ರತೆಯ ಕೇಂದ್ರಬಿಂದು ರಾಜ್ಯ ವಿಪತ್ತು ನಿರ್ವಹಣಾ ಕೋಶದಿಂದ ದೃಢೀಕರಣ ಬಿಡುಗಡೆ ಮಾಡಿದ್ದು, ಕೆಎಸ್ಎನ್‌ಡಿಎಂಸಿ ಅಧಿಕೃತ ಮಾಹಿತಿ ಪ್ರಕಾರ ಭೂಕಂಪನದ ಪ್ರಖರತೆ 2.3 ಪರಿಮಾಣ ಆಗಿದೆ. ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಪ್ರಕಾರ ಈ ಭೂಕಂಪದ ಮೂಲಸ್ಥಾನ ಕೊಡಗು ಜಿಲ್ಲೆಯ ಕರಿಕೆ ಆಗಿದೆ. ಇದೇ ಕಾರಣದಿಂದ ಸುಳ್ಯ ತಾಲೂಕಿನ ಹಲವೆಡೆ ಇದರ ಪ್ರತಿಫಲನದಿಂದ ಭೂಮಿ ಕಂಪಿಸಿರುವುದಾಗಿ ಅಂದಾಜಿಸಲಾಗಿದೆ . ಕರಿಕೆಯನ್ನು ಕೇಂದ್ರವಾಗಿಟ್ಟು ರಿಕ್ಟರ್ ಮಾಪಕದಲ್ಲಿ 2.3 ಭೂಕಂಪನವಾಗಿದ್ದು , ಬೆಳಿಗ್ಗೆ 9 ಗಂಟೆ 9 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದೆ . 4.7 ಕಿಲೋಮೀಟರ್ ಮಹಾಕೇಂದ್ರ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದ್ದು, ಚೆಂಬು, ಸಂಪಾಜೆ ಪ್ರದೇಶಗಳಲ್ಲಿ ಭೂಕಂಪನವಾಗಿದೆ ಎಂದು ಅಧಿಕೃತ ವರದಿ ತಿಳಿಸಿದೆ.