Sulya :- ಸುಳ್ಯದಲ್ಲಿ ಮಧ್ಯರಾತ್ರಿ ಮತ್ತೆ ಕಂಪಿಸಿದ ಭೂಮಿ. ವಾರದಲ್ಲಿ ಇದು ನಾಲ್ಕನೇ ಭೂಕಂಪನ. ಜನರಲ್ಲಿ ಆತಂಕ..!!
Friday, July 1, 2022
ಸುಳ್ಯ
ಸುಳ್ಯ ತಾಲೂಕಿನ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಮತ್ತೊಮ್ಮೆ ನಿನ್ನೆ ತಡರಾತ್ರಿ 1.15 ಕ್ಕೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಏಕಾಏಕಿ ಉಂಟಾದ ಬಾರೀ ಶಬ್ದ ಗಾಢ ನಿದ್ರೆಯಲ್ಲಿದ್ದ ಜನರನ್ನು ಆತಂಕಕೀಡು ಮಾಡಿತ್ತು. ಮೊದಲು ಭಾರೀ ಶಬ್ದ ಕೇಳಿ ಬಂದಿದ್ದು, ನಂತರ ಒಮ್ಮೆಗೆ ಸುಮಾರು 2 ಸೆಕೆಂಡ್ ಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಖಾಸಗಿ ಸಂಸ್ಥೆಯೊಂದರ ಮಾಹಿತಿ ಪ್ರಕಾರ ಈ ಭೂಕಂಪ 3.0ತೀವ್ರತೆ ಇತ್ತು ಎನ್ನಲಾಗಿದೆ. ಕೆಲವರು ಪ್ರಾಣಭಯದಿಂದ ಹೆದರಿ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಕಳೆದ ಒಂದು ವಾರದೊಳಗೆ ಕೊಡಗು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಇದು ನಾಲ್ಕನೇ ಬಾರಿ ಭೂಮಿ ಕಂಪಿಸಿದ ಅನುಭವವಾಗುತ್ತಿದೆ.