ಪ್ರಾಣದ ಆಸೆ ತೊರೆದು ಹಳಿಯಲ್ಲಿ ಬಿದ್ದ ವ್ಯಕ್ತಿಯನ್ನು ಬದುಕಿಸಿದ ರೈಲ್ವೆ ಸಿಬ್ಬಂದಿ: ಭರಪೂರ ಮೆಚ್ಚುಗೆ
Saturday, June 25, 2022
ಮಂಗಳೂರು: ರೈಲ್ವೆ ಹಳಿಗೆ ಬಿದ್ದೋ, ಆತ್ಮಹತ್ಯೆ ಮಾಡಲೆಂದೋ ಹೋಗಿ ರೈಲು ಅಪಘಾತಗಳು ನಡೆಯುತ್ತಿರುತ್ತವೆ. ಆದರೆ ಕೆಲವೊಮ್ಮೆ ಜೀವದ ಹಂಗು ತೊರೆದು ರಕ್ಷಿಸಿ ಸಮಯ ಪ್ರಜ್ಞೆ ಮೆರೆಯುವ ಘಟನೆಗಳು ನಡೆಯುತ್ತಿರುತ್ತವೆ. ಇಂತಹದ್ದೇ ಘಟನೆಯೊಂದು ನಡೆದು ರೈಲ್ವೆ ಸಿಬ್ಬಂದಿಗೆ ಭರಪೂರ ಮೆಚ್ಚುಗೆ ದೊರೆತಿದೆ.
ರೈಲ್ವೆ ಫ್ಲಾಟ್ ಫಾರ್ಮ್ ನಲ್ಲಿ ಸಂಚರಿಸುತ್ತಿದ್ದ ರೈಲ್ವೆ ಸಿಬ್ಬಂದಿ ಸತೀಶ್ ಕುಮಾರ್ ಗೆ ಹಳಿ ಮೇಲೆ ವ್ಯಕ್ತಿಯೋರ್ವರುವ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಅವರು ಓಡಿ ಹೋಗಿ ಹಳಿಗೆ ಹಾರಿ ವ್ಯಕ್ತಿಯನ್ನು ಪಾರು ಮಾಡಿದ್ದಾರೆ. ಇನ್ನೇನು ಕೆಲವೇ ಸೆಕೆಂಡ್ ಗಳಲ್ಲಿ ರೈಲು ಆಗಮಿಸಿದೆ. ಮೈ ಜುಮ್ಮೆನಿಸುವ ಈ ಘಟನೆಯ ಸಿಸಿ ಟಿವಿ ಫೂಟೇಜ್ ಈಗ ವೈರಲ್ ಆಗುತ್ತಿದೆ. ಈ 24 ಸೆಕೆಂಡ್ ಗಳ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ 3ಲಕ್ಷದಷ್ಟು ಮಂದಿ ವೀಕ್ಷಿಸಿ ಸತೀಶ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆ ಸೂಸಿದ್ದಾರೆ.
ಈ ವೀಡಿಯೋವನ್ನು ಹಂಚಿಕೊಂಡಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ರೈಲ್ವೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ರೈಲ್ವೆ ಸಿಬ್ಬಂದಿ ಸತೀಶ್ ಕುಮಾರ್ ಹಳಿ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿ ಹೀರೊ ಆಗಿದ್ದಾರೆ. ಇಂತಹ ಧೈರ್ಯಶಾಲಿ, ಪರಿಶ್ರಮಿ ಸಿಬ್ಬಂದಿಯಿಂದ ನೂರಾರು ಮಂದಿಯ ಪ್ರಾಣ ಉಳಿಯುತ್ತದೆ. ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ' ಎಂದು ವೀಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.