-->
Uppinangadi:- ಹಿಜಾಬ್ ವಿವಾದ.. ವಿನಂತಿ ದಿಕ್ಕರಿಸಿದ 24 ವಿದ್ಯಾರ್ಥಿನಿಯರಿಗೆ ಒಂದು ವಾರದ ಕಾಲ ತರಗತಿಗೆ ನಿರ್ಬಂಧ..!

Uppinangadi:- ಹಿಜಾಬ್ ವಿವಾದ.. ವಿನಂತಿ ದಿಕ್ಕರಿಸಿದ 24 ವಿದ್ಯಾರ್ಥಿನಿಯರಿಗೆ ಒಂದು ವಾರದ ಕಾಲ ತರಗತಿಗೆ ನಿರ್ಬಂಧ..!

ಉಪ್ಪಿನಂಗಡಿ

ಹಿಜಾಬ್ ವಿಚಾರವಾಗಿ ನಾನಾ ಘಟನಾವಳಿಗೆ ಕಾರಣವಾಗುತ್ತಿದ್ದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರವೂ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರು ಪಟ್ಟು ಹಿಡಿಡಿದ್ದು, ಪ್ರಿನ್ಸಿಪಾಲ್ ಅವರ ಹಾಗೂ ಆಡಳಿತ ಮಂಡಳಿಯ ಸತತ ವಿನಂತಿಯನ್ನೂ ದಿಕ್ಕರಿಸಿದ ಕಾರಣಕ್ಕಾಗಿ 24 ಮಂದಿ ವಿದ್ಯಾರ್ಥಿನಿಯರಿಗೆ ಒಂದು ವಾರದ ಕಾಲ ತರಗತಿ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಲೇಜಿನಲ್ಲಿ ಈಗಾಗಲೇ ನಡೆಯುತ್ತಿರುವ ಅಹಿತಕರ ಘಟನಾವಳಿಯ ಹಿನ್ನೆಲೆಯಲ್ಲಿ ಮಂಗಳೂರು 
ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕಿ ಸೋಮವಾರದಂದು ಕಾಲೇಜಿಗೆ ಭೇಟಿ ನೀಡಿ 
ವಿದ್ಯಾರ್ಥಿನಿಯರ ಅಹವಾಲನ್ನು ಆಲಿಸಿದರು. ಹಾಗೂ ತರಗತಿಗೆ ಹಾಜರಾಗಿ ಕಲಿಕಾ ಪ್ರಕ್ರಿಯೆಯಲ್ಲಿ 
ಭಾಗಿಯಾಗಲು ವಿನಂತಿಸಿದರು. ಆದರೆ ಅದ್ಯಾವುದಕ್ಕೂ ಮಾನ್ಯತೆ ನೀಡದ ವಿದ್ಯಾರ್ಥಿನಿಯರು ಹಿಜಾಬ್ ನೊಂದಿಗೆ ಕಾಲೇಜು 
ಪ್ರವೇಶಿಸಲು ಹಠ ಹಿಡಿದ ಹಿನ್ನೆಲೆಯಲ್ಲಿ 
ಸೋಮವಾರದಂದು ಡ್ರೆಸ್ಸಿಂಗ್ ರೂಮಿನಲ್ಲೂ ಇವರಿಗೆ ಠಿಕಾಣಿ ಹೂಡಲು ಅವಕಾಶ ನಿರಾಕರಿಸಲಾಗಿತ್ತು. ದಿನವಿಡೀ ನಡೆದ ಪ್ರಹಸನದ ಬಳಿಕ ಸಾಯಂಕಾಲದ ವೇಳೆ ಕಾಲೇಜಿನ ಉಪನ್ಯಾಸಕರ ಸಭೆ ಕರೆದ ಕಾಲೇಜು ಪ್ರಾಂಶುಪಾಲ ಶೇಖರ್ ರವರು ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು, ಸರಕಾರದ ಸುತ್ತೋಲೆ, ಕಾಲೇಜು ಅಭಿವೃದ್ಧಿ 
ಸಮಿತಿ ಕೈಗೊಂಡ ನಿರ್ಣಯದ ಆಧಾರದಲ್ಲಿ 
ಸಮವಸ್ತ್ರ ನಿಯಮಾವಳಿಯನ್ನು 
ಉಲ್ಲಂಘಿಸುತ್ತಾ ಕಾಲೇಜಿನ ಕಲಿಕಾ ವಾತಾವರಣವನ್ನು ಹಾನಿಗೊಳಿಸುತ್ತಿರುವ 24 ವಿದ್ಯಾರ್ಥಿನಿಯರಿಗೆ ಮುಂದಿನ ಒಂದು ವಾರದ ಕಾಲ ತರಗತಿ ನಿರ್ಬಂಧ ವಿಧಿಸಿ ನಿರ್ಣಯ ಕೈಗೊಂಡರು. ಇದೇ ವಿವಾದಕ್ಕೆ ಸಂಭಂದ ಈ ಹಿಂದೆಯೇ 7 ಮಂದಿ ವಿದ್ಯಾರ್ಥಿಯರಿಗೆ ತರಗತಿ ನಿರ್ಬಂಧ 
ವಿಧಿಸಲಾಗಿತ್ತು.

Ads on article

Advertise in articles 1

advertising articles 2

Advertise under the article