ಮಂಗಳೂರು: ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ನಲ್ಲಿ ನಿಂತು 'ಯೋಗ' ಮಾಡಿದ ಗಮನ ಸೆಳೆದ ಯೋಗವೀರ!
Tuesday, June 21, 2022
ಮಂಗಳೂರು: ನೆಲದಲ್ಲಿ ನಿಂತು ಯೋಗ ಎಲ್ಲರೂ ಮಾಡುತ್ತಾರೆ. ಆದರೆ ಮಂಗಳೂರಿನಲ್ಲೊಬ್ಬರು ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು 'ಯೋಗ' ಮಾಡಿ ವಿನೂತನ ರೀತಿಯಲ್ಲಿ ಯೋಗ ದಿನ ಆಚರಿಸಿದ್ದಾರೆ.
ಹೌದು .. ವೇವ್ ಸರ್ಫ್ ಸ್ಕೂಲ್ ಆ್ಯಂಡ್ ಕೆಫೆ ಮಾಲಕ ಅನೀಶ್ ಪಣಂಬೂರು ಈ ರೀತಿ ವಿಶಿಷ್ಟ ಶೈಲಿಯಲ್ಲಿ ಯೋಗ ಹಾಗೂ ಸೂರ್ಯ ನಮಸ್ಕಾರ ಮಾಡಿದವರು. ಇಂದು ಬೆಳಗ್ಗೆ ತಣ್ಣೀರುಬಾವಿ ಬೀಚ್ ಮುಂಭಾಗದಲ್ಲಿರುವ ಫಲ್ಗುಣಿ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ನಲ್ಲಿ ನಿಂತು ಯೋಗ, ಸೂರ್ಯ ನಮಸ್ಕಾರ ಮಾಡಿದ್ದಾರೆ. ಇದುವರೆಗೆ ಯಾರೂ ಈ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ನಲ್ಲಿ ಶೀರ್ಷಾಸನ ಯೋಗ, ಸೂರ್ಯ ನಮಸ್ಕಾರ ಮಾಡಿಲ್ಲ. ಆದರೆ ಅನೀಶ್ ಪಣಂಬೂರು ಇಂತಹ ವಿಭಿನ್ನ ಪ್ರಯತ್ನವೊಂದನ್ನು ಮಾಡಿದ್ದಾರೆ.
ಹರಿಯುವ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ನದಿಯಲ್ಲಿ ಚಲಿಸುತ್ತಿರುವ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗ ಮಾಡವವರು ದೇಹದ ಬ್ಯಾಲೆನ್ಸ್ ಅನ್ನು ಕಾಯ್ದುಕೊಂಡು ನೀರಿಗೆ ಬೀಳದಂತೆ ಯೋಗ ಮಾಡಬೇಕಾಗುತ್ತದೆ. ಇದಕ್ಕೆ ಏಕಾಗ್ರತೆ ಹಾಗೂ ದೇಹದ ಬ್ಯಾಲೆನ್ಸ್ ಬೇಕಾಗುತ್ತದೆ. ಆದರೆ ಅನೀಶ್ ಪಣಂಬೂರು ಸತತ ಪ್ರಯತ್ನದ ಮೂಲಕ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗ ಮಾಡಿದ್ದಾರೆ. ಅನೀಶ್ ಪಣಂಬೂರು ಅವರು ಸರ್ಫಿಂಗ್ ಕೋಚ್ ಆಗಿದ್ದು, ಸಾಕಷ್ಟು ವಿದ್ಯಾರ್ಥಿಗಳಿಗೆ ಸರ್ಫಿಂಗ್ ಕಲಿಸುತ್ತಿದ್ದಾರೆ.