ಸಮುದ್ರಮಟ್ಟದಿಂದ ಸಾವಿರಾರು ಅಡಿ ಎತ್ತರದ ಕನಿಷ್ಠ ಉಷ್ಣಾಂಶದಲ್ಲಿ ಬರಿಮೈಯಲ್ಲಿ ಯೋಗ ಮಾಡಿ ಗಮನಸೆಳೆದ ಹಿಮವೀರ ಸೈನಿಕರು!
Tuesday, June 21, 2022
ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಎಲ್ಲರೂ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ಸಮುದ್ರಮಟ್ಟದಿಂದ 17 ಸಾವಿರ ಅಡಿ ಎತ್ತರದಲ್ಲಿನ ಇಂಡೋ - ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಸೈನಿಕರು ಮೈಕೊರೆಯುವ ಚಳಿಯಲ್ಲಿ ಬರೀ ಮೈಯಲ್ಲಿ ಯೋಗ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹಿಮಾಚಲ ಪ್ರದೇಶದ ಸಮುದ್ರ ಮಟ್ಟದಿಂದ 16,500 ಅಡಿ ಎತ್ತರವಿರುವ ಪ್ರದೇಶದಲ್ಲಿ ಹಾಗೂ ಉತ್ತರಕಾಂಡದಲ್ಲಿ ಸಮುದ್ರಮಟ್ಟದಿಂದ 14,500 ಸಾವಿರ ಎತ್ತರದ ಪ್ರದೇಶದಲ್ಲಿ ಐಟಿಬಿಪಿ ಹಿಮವೀರರು ಯೋಗಾಸನ ಮಾಡಿ ಗಮನ ಸೆಳೆದಿದ್ದಾರೆ. ಇದಲ್ಲದೆ ಸಿಕ್ಕಿಂ, ಅರುಣಾಚಲ ಪ್ರದೇಶದ ಕನಿಷ್ಠ ಉಷ್ಣಾಂಶ ಪ್ರದೇಶಗಳಲ್ಲೂ ಹಿಮ ವೀರರು ಯೋಗಾಸನ ಮಾಡಿದ್ದು, ಇದು ಭಾರತೀಯ ಸೈನಿಕರ ಸಾಮರ್ಥ್ಯದ ಪ್ರತೀಕದಂತಿತ್ತು.
ಈ ರೀತಿಯಲ್ಲಿ ಯೋಗಾಸನ ಮಾಡುವ ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಭಾರತೀಯ ಸೈನ್ಯದ ಕರ್ತವ್ಯ ನಿಷ್ಠೆ, ಸಾಮರ್ಥ್ಯ, ಬದ್ಧತೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.