ಅಮರನಾಥದಲ್ಲಿ ಭಾರೀ ಮೇಘಸ್ಪೋಟ: 13 ಯಾತ್ರಿಕರು ಬಲಿ, 40 ಮಂದಿ ಕಣ್ಮರೆ
Saturday, July 9, 2022
ಅಮರನಾಥ: ಹಿಂದೂಗಳ ಅತ್ಯಂತ ಪವಿತ್ರ ಧಾರ್ಮಿಕ ಗುಹಾ ಕ್ಷೇತ್ರ ಅಮರನಾಥದ ಬಳಿ ಭಾರೀ ಮೇಘಸ್ಪೋಟ ಸಂಭವಿಸಿ 13 ಮಂದಿ ಮೃತಪಟ್ಟು, 40 ಮಂದಿ ಕಣ್ಮರೆಯಾಗಿದ್ದಾರೆ. ಅಲ್ಲದೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕಾಶ್ಮೀರದ ಹಿಮಾಲಯದ ದಕ್ಷಿಣ ಭಾಗದಲ್ಲಿ ಜುಲೈ 8ರ ಸಂಜೆ 5.30 ಸುಮಾರಿಗೆ ಮಳೆಯ ನಡುವೆಯೇ ಹಠಾತ್ ಎಂದು ಭಾರೀ ಮೇಘಸ್ಪೋಟ ಸಂಭವಿಸಿದೆ. ಏಕಾಏಕಿ ಬಂದಿರುವ ಈ ಪ್ರವಾಹದಿಂದ 25 ಟೆಂಟ್ ಗಳು, 3 ಕಮ್ಯುನಿಟಿ ಕಿಚನ್ ಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ.
ಪೊಲೀಸ್, ಸೈನ್ಯ, ಎನ್ ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.