ವಿವಾಹವಾಗುವ ಭರವಸೆ ನೀಡಿ ಲೈಂಗಿಕ ಸಂಪರ್ಕ, 14 ಬಾರಿ ಗರ್ಭಪಾತ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ
Friday, July 15, 2022
ನವದೆಹಲಿ: ಸಾಫ್ಟ್‌ವೇರ್ ಇಂಜಿನಿಯರ್ ಮದುವೆಯಾಗುವೆನೆಂದು ನಂಬಿಸಿ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿ 14 ಬಾರಿ ಗರ್ಭಪಾತ ಮಾಡಿರುವುದಾಗಿ ಆರೋಪಿಸಿ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗ್ನೇಯ ದೆಹಲಿಯ ಜೈತ್ ಪುರ್ ನಲ್ಲಿ ನಡೆದಿದೆ. ಪತಿಯಿಂದ ದೂರವಾಗಿರುವ ಈ ಯುವತಿ ಸಾಫ್ಟ್‌ವೇರ್ ಇಂಜಿನಿಯರ್ ನನ್ನು ನಂಬಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಈ ಯುವತಿ ಡೆತ್ ನೋಟ್ ನಲ್ಲಿ ತಾನು ನೋಯ್ಡಾದ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಟೆಕ್ಕಿಯೊಂದಿಗೆ ಸಂಬಂಧ ಹೊಂದಿದ್ದೆ. ಆತ ಮದುವೆಯಾಗುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾನು ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದೆ. ಆತ ವಿವಾಹವಾಗುವೆನೆಂದು ನಂಬಿಸಿ ಕಳೆದ 8ವರ್ಷಗಳಲ್ಲಿ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿ 13 ಬಾರಿ ಗರ್ಭಪಾತ ಮಾಡಿದ್ದಾನೆ.
ಇದೀಗ 14ನೇ ಬಾರಿ ಗರ್ಭ ಧರಿಸಿದ್ದೆ. ಅದನ್ನೂ ತೆಗೆಸುವಂತೆ ಹೇಳಿದ್ದಾನೆ. ಅದನ್ನು ತೆಗಿಸಿದ ಬಳಿಕ ತನಗೆ ಜೀವನವೇ ಬೇಡವೆಂದು ಎನಿಸಿದೆ. ಈ ರೀತಿ ಗರ್ಭಪಾತ ಮಾಡಿ ಬದುಕೋದು ದುಸ್ತರವಾಗಿದೆ. ಆತ ತನ್ನನ್ನು ಮದುವೆಯಾಗೋದು ಸಂಶಯವೆನಿಸಿದೆ. ಆದ್ದರಿಂದ ತಾನು ಆತ್ಮಹತ್ಯೆ ಮಾಡೋದಾಗಿ ಆಕೆ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.