ಹೊಸದಿಲ್ಲಿ: ಸಂಚರಿಸುತ್ತಿದ್ದ ಕಾರಿನೊಳಗಡೆ 16ರ ಬಾಲಕಿಯ ಸಾಮೂಹಿಕ ಅತ್ಯಾಚಾರ
Friday, July 15, 2022
ಹೊಸದಿಲ್ಲಿ: ಮನೆಯ ಬಲಿಯಿಂದಲೇ 16ರ ಬಾಲಕಿಯ ಅಪಹರಿಸಿದ ದುಷ್ಕರ್ಮಿಗಳು ಸಂಚರಿಸುತ್ತಿದ್ದ ಕಾರಿನಲ್ಲಿಯೇ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ದಿಲ್ಲಿಯ ವಸಂತ್ ವಿಹಾರದಿಂದ ನೆರೆಯ ಉತ್ತರಪ್ರದೇಶದ ಗಾಝಿಯಾಬಾದ್ ಸುಮಾರು 44 ಕಿ.ಮೀ.ಗಳರವರೆಗೆ ಕಾರು ಚಲಾಯಿಸಿದ್ದರಿಂದ ಘಟನೆ ತಕ್ಷಣ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಇದೀಗ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 23, 25 ಹಾಗೂ 35 ವರ್ಷದ ಮೂವರನ್ನು ಬಂಧಿಸಿದ್ದಾರೆ.
ಜುಲೈ 6ರಂದು ಬಾಲಕಿ ಸ್ನೇಹಿತೆಯ ಮನೆಯಿಂದ ಹಿಂದಿರುಗಿ ಇಬ್ಬರು ಆರೋಪಿಗಳನ್ನು ಮಾರುಕಟ್ಟೆ ಬಳಿ ಭೇಟಿಯಾಗಿದ್ದಳು. ಆಗ ಆರೋಪಿಗಳಲ್ಲಿಬ್ಬರು ಜ್ಯೂಸ್ ಗೆ ಪ್ರಜ್ಞೆ ತಪ್ಪುವ ಪದಾರ್ಥ ಬೆರಸಿ ನೀಡಿದ್ದರು. ಆ ಬಳಿಕ ಆಕೆಯನ್ನು ಕಾರಿನಲ್ಲಿ ನಗರದಾದ್ಯಂತ ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ಅಲ್ಲದೆ ಆಕೆಗೆ ಚೆನ್ನಾಗಿ ಥಳಿಸಲಾಗಿದೆ. ಅತ್ಯಾಚಾರದ ವೀಡಿಯೋ ಕೂಡಾ ಮಾಡಲಾಗಿದೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ನಡೆದ ಎರಡು ದಿನಗಳ ಬಳಿಕ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಆಸ್ಪತ್ರೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.