ಅಪ್ರಾಪ್ತೆಯ ಅಪಹರಣ ಮಾಡಿರುವ ಆರೋಪಿ 7ತಿಂಗಳ ಬಳಿಕ ಅರೆಸ್ಟ್
Tuesday, July 12, 2022
ಮಧುರೈ: ಆನ್ಲೈನ್ ಗೇಮ್ ಒಂದರ ಮೂಲಕ ಪರಿಚಯ ಮಾಡಿಕೊಂಡ ಅಪ್ರಾಪ್ತೆಯನ್ನು ಮದುವೆಯಾಗುತ್ತೇನೆಂದು ಮಹಾರಾಷ್ಟ್ರಕ್ಕೆ ಅಪಹರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು 7 ತಿಂಗಳ ಬಳಿಕ ಪೊಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಮಹಾರಾಷ್ಟ್ರ ನಿವಾಸಿ ಸೆಲ್ವ (22) ಎಂಬಾತನೇ ಬಂಧಿತ ಆರೋಪಿ. ಈತ ತಮಿಳುನಾಡು ರಾಜ್ಯದ ಮಧುರೈ ಮೂಲದ ಅಪ್ರಾಪ್ತೆಯನ್ನು ಫ್ರೀ ಫೈರ್ ಆನ್ಲೈನ್ ಗೇಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಆ ಬಳಿಕ ಆಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ 2021ರ ಡಿಸೆಂಬರ್ 20ರಂದು ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದ. ಇತ್ತ ಬಾಲಕಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಬೆನ್ನಟ್ಟಿದ ಪೊಲೀಸರು ಮೊಬೈಲ್ ಟವರ್ ಮೂಲಕ ಬಾಲಕಿಯನ್ನು ಪುಣೆಯಲ್ಲಿ ಪತ್ತೆ ಹಚ್ಚಿದ್ದರು. ಎಪ್ರಿಲ್ 4 ರಂದು ಬಾಲಕಿಯನ್ನು ತಮಿಳುನಾಡಿಗೆ ವಾಪಸ್ ಕರೆತರಲಾಗಿತ್ತು. ಆದರೆ ಈ ವೇಳೆ ಆರೋಪಿ ಸೆಲ್ವ ನಾಪತ್ತೆಯಾಗಿದ್ದನು. ಅಂದಿನಿಂದ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಸೆಲ್ವ ಮಹಾರಾಷ್ಟ್ರದ ರಾಜ್ಕೋಟ್ನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು 5 ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು 7 ತಿಂಗಳ ಬಳಿಕ ಬಂಧಿಸಿ ತಮಿಳುನಾಡಿಗೆ ಕರೆತಂದಿದ್ದಾರೆ.
ಅಪ್ರಾಪ್ತೆಯನ್ನು ಅಪಹರಿಸಿರುವ ಆರೋಪದ ಮೇಲೆ ಪೊಕ್ಸೊ ಕಾಯ್ದೆ ದಾಖಲಿಸಲಾಗಿದೆ. ವಿಚಾರಣೆಯ ಬಳಿಕ ಕೋರ್ಟ್ಗೆ ಹಾಜರುಪಡಿಸಿ ಮಧುರೈನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.