75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಪೂರ್ವಜರ ಮನೆಗೆ ಭೇಟಿ ನೀಡಿದ 92ರ ವೃದ್ಧೆ
Sunday, July 17, 2022
ಇಸ್ಲಮಾಬಾದ್: ಭಾರತ - ಪಾಕಿಸ್ತಾನ ಇಬ್ಭಾಗವಾದ ಬಳಿಕ ಎಷ್ಟೋ ಮಂದಿ ತಮ್ಮ ಪೂರ್ವಜರನ್ನಾಗಲಿ, ಅವರ ಮನೆಗೆಗಾಗಲಿ ಭೇಟಿಯಾದದ್ದೇ ಇಲ್ಲ. ಅದೇ ರೀತಿ ಇಲ್ಲೊಬ್ಬ ವಯೋವೃದ್ಧೆ ಬರೋಬ್ಬರಿ 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿದ್ದಾರೆ. ಇದೀಗ ಆಕೆಯ ಬಹುವರ್ಷಗಳ ಕನಸು ಈಡೇರಿದೆ.
ರೀನಾ ಚಿಬರ್(92) ಎಂಬ ಈ ವಯೋವೃದ್ಧೆಗೆ ಪಾಕಿಸ್ತಾನದ ಹೈಕಮಿಷನ್ ನಿಂದ ವೀಸಾ ಅನುಮತಿ ದೊರಕಿದೆ. ವೃದ್ಧೆಯ ಪೂರ್ವಜರ ಮನೆಗೆ ಭೇಟಿ ನೀಡಲು ಅವಕಾಶ ಕೋರಿದ್ದಕ್ಕೆ 3 ತಿಂಗಳ ವೀಸಾ ಅನುಮತಿಯನ್ನು ಪಾಕಿಸ್ತಾನದ ಅಧಿಕಾರಿಗಳು ನೀಡಿದ್ದಾರೆ. ಅನುಮತಿ ದೊರಕಿದ ಬೆನ್ನಲ್ಲೇ ಶನಿವಾರ ರೀನಾ ಚಿಬರ್ ಅವರು ವಾಘಾ - ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ಹೋಗುವ ವೇಳೆ ಆಕೆ ತೊಡಗಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.
ರೀನಾ ಚಿಬರ್ ಅವರ ಪೂರ್ವಜರ ನಿವಾಸವಿರುವುದು ರಾವಲ್ಪಿಂಡಿಯ ಪ್ರೇಮ್ ನಿವಾಸ್ ನಲ್ಲಿ. ತಮಗೆ ಪೂರ್ವಜರ ಮನೆಗೆ ಭೇಟಿ ನೀಡಲು ಅನುಮತಿ ನೀಡಿರುವ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳಿಗೆ ಆಕೆ ಅಭಿನಂದನೆ ಸಲ್ಲಿಸಿದ್ದಾರೆ.