![ಉಳ್ಳಾಲ: ಮಲತಂದೆಯಿಂದಲೇ 9ವರ್ಷದ ಪುತ್ರಿಯ ಮೇಲೆ ಪೈಶಾಚಿಕ ಕೃತ್ಯ; ವಿಪರೀತ ರಕ್ತಸ್ರಾವದಿಂದ ಬಾಲಕಿ ಆಸ್ಪತ್ರೆಗೆ ದಾಖಲು ಉಳ್ಳಾಲ: ಮಲತಂದೆಯಿಂದಲೇ 9ವರ್ಷದ ಪುತ್ರಿಯ ಮೇಲೆ ಪೈಶಾಚಿಕ ಕೃತ್ಯ; ವಿಪರೀತ ರಕ್ತಸ್ರಾವದಿಂದ ಬಾಲಕಿ ಆಸ್ಪತ್ರೆಗೆ ದಾಖಲು](https://blogger.googleusercontent.com/img/b/R29vZ2xl/AVvXsEj8SPmr3B1hQX3LEKFpKuM8X1kY5iWPJxfVPrHQoPvu4ZLdVlna_oMLUh4kpkPoyL-iEHVcvJ63YYwBMvU2bk-AwONqknSfdDv1F3UZ2kYO5cXSiwlnzZ-07Knz5HWzOgey9t2JLnGnqnWh/s1600/1658892485115641-0.png)
ಉಳ್ಳಾಲ: ಮಲತಂದೆಯಿಂದಲೇ 9ವರ್ಷದ ಪುತ್ರಿಯ ಮೇಲೆ ಪೈಶಾಚಿಕ ಕೃತ್ಯ; ವಿಪರೀತ ರಕ್ತಸ್ರಾವದಿಂದ ಬಾಲಕಿ ಆಸ್ಪತ್ರೆಗೆ ದಾಖಲು
Wednesday, July 27, 2022
ಉಳ್ಳಾಲ: ಮಲತಂದೆಯೇ 9 ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗಿರುವ ಹೇಯ ಕೃತ್ಯವೊಂದು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ವಿಪರೀತ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೇರಳ ಗಡಿಭಾಗ ವಾಸಿ ಪ್ರಸ್ತುತ ಪಾವೂರು ಎಂಬಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಅಶ್ವತ್ಥ್ (25) ಆರೋಪಿ.
ಆರೋಪಿ ಅಶ್ವತ್ಥ್ ಪತಿಯನ್ನು ತ್ಯಜಿಸಿರುವ ಮಹಿಳೆಯನ್ನು ವಿವಾಹವಾಗಿದ್ದ. ಈಕೆಗೆ ಮೊದಲ ಪತಿಯ ಒಂಬತ್ತು ವರ್ಷದ ಮಗಳಿದ್ದಳು. ಇವರು ಒಟ್ಟಿಗೆ ಪಾವೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮಹಿಳೆ ಗರ್ಭಿಣಿಯಾಗಿದ್ದು, ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಶ್ವತ್ಥ್ ಹಾಗೂ ಬಾಲಕಿ ಮಾತ್ರ ಮನೆಯಲ್ಲಿದ್ದರು. ಈ ಸಂದರ್ಭ ಅಶ್ವತ್ಥ್ ನ ಕಾಮದ ಕಣ್ಣು ಬಾಲಕಿಯ ಮೇಲೆ ಬಿದ್ದಿದೆ. ಆರೋಪಿ ಬಾಲಕಿಯನ್ನು ಅತ್ಯಾಚಾರವೆಸಗಿದ್ದಾನೆ. ಪರಿಣಾಮ ವಿಪರೀತ ರಕ್ತಸ್ರಾವವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣ ಈ ಬಗ್ಗೆ ದೂರು ದಾಖಲಾಗಿದೆ. ಕೊಣಾಜೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.