ಮಂಗಳೂರು: ಅಕ್ರಮ ಜಾನುವಾರು ಮಾಂಸದ ಅಡ್ಡೆಗೆ ಪೊಲೀಸ್ ದಾಳಿ; 95 ಕೆಜಿ ಮಾಂಸ ವಶಕ್ಕೆ
Sunday, July 3, 2022
ಮಂಗಳೂರು: ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 95 ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಪರಾರಿಯಾಗಿದ್ದಾನೆ.
ಅರ್ಕುಳ ಕೋಟೆಯ ಎ.ಕೆ.ಖಾಲಿದ್ ಎಂಬವರಿಗೆ ಸೇರಿರುವ ಶೆಡ್ ಒಂದರಲ್ಲಿ ಬಾಷಿತ್ ಎಂಬಾತ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಇಂದು ಬೆಳಗ್ಗೆ 9ಗಂಟೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು 95 ಕೆಜಿ ಜಾನುವಾರು ಮಾಂಸ, ಕತ್ತಿ, ತೂಕದ ಯಂತ್ರ, ಇತರ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಸಂದರ್ಭ ಆರೋಪಿ ಬಾಷಿತ್ ಪರಾರಿಯಾಗಿದ್ದಾನೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.