-->
ಕಾಸರಗೋಡು: ಮಹಿಳೆಗೆ ಕಿರುಕುಳ ನೀಡಿರುವ ಆರೋಪಿಗಳು ಅಂದರ್

ಕಾಸರಗೋಡು: ಮಹಿಳೆಗೆ ಕಿರುಕುಳ ನೀಡಿರುವ ಆರೋಪಿಗಳು ಅಂದರ್

ಕಾಸರಗೋಡು: ಮಹಿಳೆಯೋರ್ವರಿಗೆ ಕಿರುಕುಳ ನೀಡುತ್ತಿದ್ದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿಜಿತ್ ಹಾಗೂ ಮುಸ್ತಫಾ ಎಂಬವರು ಬಂಧಿತ ಆರೋಪಿಗಳು.

ಮಂಗಳವಾರ ಸಂಜೆ ಮಂಜೇಶ್ವರರ ಕಾಲೇಜು ಸಿಬ್ಬಂದಿಯನ್ನು ತಡೆದ ಆರೋಪಿಗಳು ಈ ಮಹಿಳೆಯ ಕೈ ಹಿಡಿದು ಎಳೆದು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಕೌಶಿಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಈ ಹಿಂದೆ ನಡೆದಿರುವ ಇಂತಹ ಪ್ರಕರಣದಲ್ಲಿ ಇದೇ ಆರೋಪಿಗಳು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article