ಬೆಂಗಳೂರು: ಅಕ್ರಮವಾಗಿ ವಾಸಿಸುತ್ತಿದ್ದ ಆಫ್ರಿಕಾ ವಿದ್ಯಾರ್ಥಿ ನಾಯಕ ವಶಕ್ಕೆ
Wednesday, July 20, 2022
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಆಫ್ರಿಕಾ ವಿದ್ಯಾರ್ಥಿ ನಾಯಕನನ್ನು ಹೊಸದಿಲ್ಲಿಯ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಫ್ರಿಕಾ ದೇಶದ ಉಗಾಂಡ ಮೂಲದ ಭಾಸ್ಕೋ ಕವಾಸಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಆಫ್ರಿಕನ್ ವಿದ್ಯಾರ್ಥಿಗಳ ಅಸೋಸಿಯೇಷನ್ ನಡೆಸುತ್ತಿದ್ದ. ಅಲ್ಲದೆ ಆಫ್ರಿಕನ್ ವಿದ್ಯಾರ್ಥಿಗಳಿಗೆ ತೊಂದರೆಯಾದಲ್ಲಿ ಸಮಾಲೋಚಕನಾಗಿ ಸಹಾಯ ಮಾಡುತ್ತಿದ್ದ.
ಆದರೆ ಈತ 2005ರಿಂದ ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಹೊಸದಿಲ್ಲಿಯ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.