ಧಾರವಾಡ: ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿ ಬಿದ್ದ ಯುವಕ; ಪ್ರಾಣ ರಕ್ಷಿಸುವಂತೆ ಗೋಗರೆತ
Tuesday, July 19, 2022
ಧಾರವಾಡ: ಕತ್ತು ಸೀಳಿಸಿಕೊಂಡು ಗುಡ್ಡದಿಂದ ಉರುಳಿ ಬಂದ ಯುವಕನೊಬ್ಬ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಾ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸವಂತೆ ಗೋಗರೆಯುತ್ತಿದ್ದ ದಯನೀಯ ಘಟನೆಯೊಂದು ಧಾರವಾಡದ ಹೊರವಲಯದಲ್ಲಿ ನಡೆದಿದೆ.
ಹಾವೇರಿ ಮೂಲದ ನವೀನ್ ದೊಡ್ಡಮನಿ(30) ಗಾಯಾಳು ಯುವಕ.
ನವೀನ್ ದೊಡ್ಡಮನಿ ನುಗ್ಗೆಕೇರಿ ಗುಡ್ಡದಿಂದ ಹೊರಳಿಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆತ ಕತ್ತು ಕುಯ್ದ ಸ್ಥಿತಿಯಲ್ಲಿದ್ದು, ಬಟ್ಟೆಯೆಲ್ಲಾ ರಕ್ತಸಿಕ್ತವಾಗಿತ್ತು. ಗುಡ್ಡದಿಂದ ಬಿದ್ದ ಆತ ಜನರನ್ನು ಕಂಡು ಪ್ರಾಣ ಉಳಿಸುವಂತೆ ಗೋಗರೆದಿದ್ದಾನೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಯಾರೋ ಆತನನ್ನು ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.