![Bellare :- ತಲವಾರು ದಾಳಿ.ಗಾಯಾಳು ಯುವಕ ಸಾವು..! Bellare :- ತಲವಾರು ದಾಳಿ.ಗಾಯಾಳು ಯುವಕ ಸಾವು..!](https://blogger.googleusercontent.com/img/b/R29vZ2xl/AVvXsEibwxCtNPOGHC427p6mr9PyDaUVegfGAXAbAtkWkhM1hZYCBWYYqCLsOB92CSB_rdqjqQ-5GcBZEN2ZnTBuhkHf_9QOJnEAz8Jr7julB21Hj93TDQn2aYzyo0gG130KkvcEfCrWhtKd48I/s1600/1658857218738991-0.png)
Bellare :- ತಲವಾರು ದಾಳಿ.ಗಾಯಾಳು ಯುವಕ ಸಾವು..!
Tuesday, July 26, 2022
ಸುಳ್ಯ
ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಯ ಮುಖಂಡನನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು , ಬೆಳ್ಳಾರೆ ಅಕ್ಷಯ ಕೋಳಿ ಅಂಗಡಿಯ ಪ್ರವೀಣ್ ನೆಟ್ಟಾರು(32) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಬಂದ ತಂಡ ತಲವಾರಿನಿಂದ ಪ್ರವೀಣ್ ಅವರಿಗೆ ಕಡಿದು ಪರಾರಿ ಆಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.