![ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಬೇಟೆ ಆರಂಭ: ಕಾರು ಚಾಲಕ ವಶಕ್ಕೆ ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಬೇಟೆ ಆರಂಭ: ಕಾರು ಚಾಲಕ ವಶಕ್ಕೆ](https://blogger.googleusercontent.com/img/b/R29vZ2xl/AVvXsEhb7fhY9Yp43Fo1VD-xlLAzUgm0O2zeZ1qfekk63A35AzzZkEkwxAQj917i5g-EJorGoHv50XcbCxhxN0stqwfc-7MpcaXy8ZMRNpc-InYEEnaQI9GYmk-kufadhq-D5kYVsF4QXLMMksFn/s1600/1659244840970751-0.png)
ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಬೇಟೆ ಆರಂಭ: ಕಾರು ಚಾಲಕ ವಶಕ್ಕೆ
Sunday, July 31, 2022
ಮಂಗಳೂರು: ನಗರದ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಹಂತಕರ ಬೇಟೆ ಆರಂಭಿಸಿದ್ದು, ಸದ್ಯ ಶಂಕಿತ ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆ ಕೃತ್ಯ ನಡೆದ ದಿನ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಹತ್ಯೆ ನಡೆಸಿದ್ದರು. ಇದೀಗ ಪೊಲೀಸರು ಕಾರು ಗುರುತು ಪತ್ತೆ ಮಾಡುವ ಮೂಲಕ ಹಂತಕರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಫಾಝಿಲ್ ನನ್ನು ಜುಲೈ 28 ರ ರಾತ್ರಿ ಸುರತ್ಕಲ್ ನ ಬಟ್ಟೆ ಅಂಗಡಿ ಮುಂಭಾಗ ನಡೆಸಲಾಗಿತ್ತು. ಹತ್ಯೆ ಮಾಡಲು ಬಳಸಿರುವ ಕಾರನ್ನು ವಶಕ್ಕೆ ತೆಗೆದುಕೊಂಡ ಅದರ ಮಾಲಿಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರು ಕೊಲೆ ನಡೆದಿರುವ ಸ್ಥಳಕ್ಕೆ ಬಂದಿದ್ದ ಕಾರನ್ನು ಸಿಸಿ ಕ್ಯಾಮರಾದ ಆಧಾರದಲ್ಲಿ ಹುಂಡೈ ಇಯಾನ್ ಕಾರು ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಸುತ್ತಮುತ್ತಲ ವ್ಯಾಪ್ತಿಯಲ್ಲಿರುವ ಹುಂಡೈ ಇಯಾನ್ ಕಾರುಗಳನ್ನು ವಶಕ್ಕೆ ತೆಗೆದುಕೊಂಡು ಅದರ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದೀಗ ಈತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಶನಿವಾರ ರಾತ್ರಿ ಕಾರು ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕನ ಹೇಳಿಕೆಯನ್ನು ಆಧರಿಸಿ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನಾಲ್ಕು ತಂಡ ಮಾಡಿಕೊಂಡು ಉಳಿದ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ.