ಬೆಳಗಾವಿ: ಕೊಟ್ಟಿಗೆ ಗೋಡೆ ಕುಸಿದು ಬಾಲಕ ಮೃತ್ಯು
Friday, July 15, 2022
ಬೆಳಗಾವಿ:ರಾತ್ರಿ ಬಿದ್ದಿರುವ ಭಾರೀ ಮಳೆಗೆ ಕೊಟ್ಟಿಗೆ ಗೋಡೆ ಕುಸಿದು ಬಾಲಕ ಮೃತಪಟ್ಟ ದುರ್ಘಟನೆಯೊಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದಲ್ಲಿ ನಡೆದಿದೆ.
ಅನಂತು ಧರ್ಮೇಂದ್ರ ಶೆಟ್ಟಿ(15) ಮೃತಪಟ್ಟ ಬಾಲಕ.
ಬಾಲಕ ನಿನ್ನೆ ರಾತ್ರಿ ಅನಂತು ಧರ್ಮೇಂದ್ರ ಶೆಟ್ಟಿ ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದ. ಈ ಸಂದರ್ಭ ಏಕಾಏಕಿ ಕೊಟ್ಟಿಗೆ ಗೋಡೆ ಕುಸಿದು ಆತನ ಮೇಲೆಯೇ ಬಿದ್ದಿದೆ. ಬಾಲಕನ ಕಿರುಚಾಟ ಕೇಳಿ ಮನೆಮಂದಿ ಓಡಿ ಬಂದು ಮಣ್ಣಿನ ಅವಶೇಷದಡಿ ಸಿಲುಕಿರುವ ಬಾಲಕನನ್ನು ಮೇಲೆತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಯನ ಪ್ರಾಣಪಕ್ಷಿ ಹಾರಿಹೋಗಿದೆ.