ತ್ರಿಶ್ಶೂರ್: ಮಹಿಂದ್ರಾ ಥಾರ್ - ಬಿಎಂಡಬ್ಲ್ಯೂ ಕಾರುಗಳ ನಡುವಿನ ರೇಸ್ ಗೆ ವೃದ್ಧ ಬಲಿ
Friday, July 22, 2022
ತ್ರಿಶೂರ್ : ಮಹಿಂದ್ರಾ ಥಾರ್ ಹಾಗೂ ಬಿಎಂಡಬ್ಲ್ಯೂ ಕಾರುಗಳ ನಡುವಿನ ರೇಸ್‌ನಿಂದ ಹಿರಿಯ ನಾಗರಿಕರೋರ್ವರು ಜೀವ ಬಲಿಯಾಗಿದೆ. ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಎರಡೂ ಕಾರುಗಳಲ್ಲಿ ಥಾರ್ ಕಾರು ರಸ್ತೆ ಬದಿಯಲ್ಲಿದ್ದ ಕಾರೊಂದಕ್ಕೆ ಡಿಕ್ಕಿಯಾಗಿರುವ ಪರಿಣಾಮ ಈ ವೃದ್ಧ ಮೃತಪಟ್ಟಿದ್ದಾರೆ.
ಗುರುವಾಯೂರು ಮೂಲದ ರವಿಶಂಕರ್ (67) ಮೃತಪಟ್ಟವರು.
ಕೇರಳದ ತ್ರಿಶೂರ್ ಜಿಲ್ಲೆಯ ಕೊಟ್ಟೆಕ್ಕಾಡ್ ಪ್ರದೇಶದಲ್ಲಿ ಮಹೀಂದ್ರಾ ಥಾರ್ ಹಾಗೂ ಬಿಎಂಡಬ್ಲ್ಯೂ ಕಾರುಗಳ ನಡುವೆ ರೇಸ್ ನಡೆದಿದೆ. ಈ ವೇಳೆ ಥಾರ್ ಕಾರು ಎಸ್‌ಯುವಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅದರಲ್ಲಿದ್ದ ವೃದ್ಧ ಪ್ರಯಾಣಿಕ ಮೃತಪಟ್ಟಿದ್ದಾರೆ
ಮಹೀಂದ್ರಾ ಥಾರ್ ಹಾಗೂ ಬಿಎಂಡಬ್ಲ್ಯು ಚಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದ್ದಾರೆ. ತಪಾಸಣೆ ನಡೆಸಿದಾಗ ಇವರಿಬ್ಬರೂ ಚಾಲನೆ ವೇಳೆಯಲ್ಲಿ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ ಪೊಲೀಸರು ತಿಳಿಸಿದ್ದಾರೆ.