![ಗದ್ದೆ ಕೆಲಸ ಮಾಡುತ್ತಿದ್ದ ಯುವಕ ಕೃಷಿಕ ಕಾಲು ಜಾರಿಬಿದ್ದು ಮೃತ್ಯು ಗದ್ದೆ ಕೆಲಸ ಮಾಡುತ್ತಿದ್ದ ಯುವಕ ಕೃಷಿಕ ಕಾಲು ಜಾರಿಬಿದ್ದು ಮೃತ್ಯು](https://blogger.googleusercontent.com/img/b/R29vZ2xl/AVvXsEhLoz4b9BZPWNjwNqng2ks9Q2mQhPnZly1_xKUopz7fv-OhfkqFHecpyrZc6PvY54cf5OWWMO9QPPxwqhBA0960sViTomII6EQsbhr3I_NfTkaLqVYn2Tqagmx_-YX8DgnSZ46HGwWckPuo/s1600/1656988950046637-0.png)
ಗದ್ದೆ ಕೆಲಸ ಮಾಡುತ್ತಿದ್ದ ಯುವಕ ಕೃಷಿಕ ಕಾಲು ಜಾರಿಬಿದ್ದು ಮೃತ್ಯು
Tuesday, July 5, 2022
ಹೆಬ್ರಿ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದು ಯುವ ಕೃಷಿಕರೋರ್ವರು ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಬೈರಂಪಳ್ಳಿಯಲ್ಲಿ ನಡೆದಿದೆ.
ಬೈರಂಪಳ್ಳಿ ದೂಪದಕಟ್ಟೆ ನಿವಾಸಿ ಉಮೇಶ್ ಕುಲಾಲ್ (35) ಮೃತಪಟ್ಟ ದುರ್ದೈವಿ.
ಉಮೇಶ್ ಕುಲಾಲ್ ಅವರು ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.