ಸಂಬಂಧಿಕರ ಮನೆಗೆಂದು ತೆರಳಿದ ನಾಲ್ವರು ಸೋದರರು ನೀರುಪಾಲು: ಮೂವರು ಮೃತ್ಯು, ಓರ್ವ ನಾಪತ್ತೆ!
Sunday, July 10, 2022
ಒಡಿಶಾ: ಸಂಬಂಧಿಕರ ಮನೆಗೆಂದು ತೆರಳಿದ್ದ ನಾಲ್ವರು ಸೋದರರಲ್ಲಿ ಮೂವರು ನೀರು ಪಾಲಾಗಿ ಮತ್ತೋರ್ವ ನಾಪತ್ತೆಯಾಗಿರುವ ದುರಂತವೊಂದು ಒಡಿಶಾದಲ್ಲಿ ನಡೆದಿದೆ.
ಜಾರ್ಖಾಂಡ್ ನಿವಾಸಿ ಸಹೋದರರಾದ ರಿಶಿ ಸಾಹು, ಆಯುಷ್ ಸಾಹು, ಕುನಾಲ್ ಸಾಹು ಹಾಗೂ ಕೌಶಲ್ ಸಾಹು ದುರಂತ ಸಹೋದರರು. ಇವರು ತಮ್ಮ ಪೋಷಕರೊಂದಿಗೆ ಒಡಿಶಾದ ರೂರ್ಕೇಲಾದ ಜಿರಿಪಾನಿ ಎಂಬಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದರು.
ಅಲ್ಲಿಗೆ ಬಂದಿರುವ ಸಹೋದರರು ಕೋಯಲ್ ನದಿಗೆ ಸ್ನಾನಕ್ಕೆಂದು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಮೂವರನ್ನು ರಕ್ಷಣೆ ಮಾಡಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಇದೀಗ ಇನ್ನೊಬ್ಬ ಸಹೋದರ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ.