ಗೃಹಿಣಿಯರಿಗೆ ಸಂತಸದ ಸುದ್ದಿ: ಖಾದ್ಯ ತೈಲದ ಬೆಲೆ 15 ರೂ. ಇಳಿಕೆ..
ಗೃಹಿಣಿಯರಿಗೆ ಸಂತಸದ ಸುದ್ದಿ: ಖಾದ್ಯ ತೈಲದ ಬೆಲೆ 15 ರೂ. ಇಳಿಕೆ..
ಖಾದ್ಯ ತೈಲದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಕೇಂದ್ರ ಸರ್ಕಾಋದ ವಿನಂತಿ ಮೇರೆಗೆ ಖಾದ್ಯ ತೈಲ ಉತ್ಪಾದಕರು ದರ ಇಳಿಕೆಗೆ ಒಪ್ಪಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಖಾದ್ಯ ತೈಲ ಬೆಲೆಯು ಲೀಟರ್‌ಗೆ 15 ರೂಪಾಯಿ ಇಳಿಕೆಯಾಗಲಿದೆ.
ಖಾದ್ಯ ತೈಲಗಳ ಬೆಲೆ ಇಳಿಕೆ ಮಾಡಬೇಕು, ಅದರ ನೇರ ಪರಿಣಾಮ ಗ್ರಾಹಕರಿಗೆ ಸಿಗಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಉಕ್ರೇನ್ ಯುದ್ದದ ಸಂದರ್ಭದಲ್ಲಿ ಖಾದ್ಯ ತೈಲ ಬೆಲೆ ಲೀಟರ್‌ಗೆ ರೂ. 105ರಿಂದ 200 ರೂಗಳ ಗಡಿ ವರೆಗೂ ಬಂದಿತ್ತು. ಇದೀಗ ಮತ್ತೆ ದರ ರೂ. 110 ಆಸುಪಾಸಿಗೆ ಬಂದಿದೆ.
ಖಾದ್ಯ ತೈಲ ದರ ರೂ. 15 ಇಳಿಕೆ:
ಜಾಗತಿಕವಾಗಿ, ಕಳೆದ ತಿಂಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಪ್ರತಿ ಟನ್‌ಗೆ ಸುಮಾರು 300-450 ಯುಎಸ್ ಡಾಲರ್ ಇಳಿಕೆಯಾಗಿದೆ. ಆದರೆ, ತೈಲ ಕಂಪೆನಿಗಳು ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಸಲಿಲ್ಲ. ಅದರ ಲಾಭವನ್ನು ತಾನೆ ಪಡೆಯುತ್ತಿತ್ತು.
ಭಾರತ ತನ್ನ ಖಾದ್ಯ ತೈಲದ ಅವಶ್ಯಕತೆಯ ಶೇಕಡಾ 60ಕ್ಕಿಂತ ಹೆಚ್ಚು ಆಮದು ಮಾಡುತ್ತದೆ.
ಗೃಹಿಣಿಯರಿಗೆ ಸಂತಸ, ಬಜೆಟ್‌ನಲ್ಲಿ ಉಳಿಯಲಿದೆ ಹಣ!
"ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಇಳಿಕೆಯಾಗಿವೆ. ಆದರೆ, ದೇಶದಲ್ಲಿ ಆ ಪ್ರಮಾಣದ ಬೆಲೆ ಇಳಿಕೆ ಆಗಿರಲಿಲ್ಲ. ಇದೀಗ, ಸರ್ಕಾರ ಉದ್ಯಮಿಗಳ ಜೊತೆ ಸಭೆ ಕರೆದು ಬೆಲೆ ಇಳಿಕೆಗೆ ಸೂಚನೆ ನೀಡಿದೆ" ಎಂದು ಸಚಿವಾಲಯ ಹೇಳಿದೆ.
ಇದು ಜನಸಾಮಾನ್ಯರಿಗೆ ಖುಷಿಯ ವಿಷಯ. ಗೃಹಿಣಿಯರಿಗೆ ಸಂತಸವಾದರೆ, ಕುಟುಂಬದ ಅತಿ ಖರ್ಚಿಗೆ ಬ್ರೇಕ್ ಬೀಳಲಿದೆ.