ತ್ರಿಶ್ಶೂರ್: ಯುವಕನ ಕಿಡ್ನಿ ಕಸಿಗೆ ಚಿನ್ನದ ಬಳೆಯನ್ನೇ ತೆಗೆದುಕೊಟ್ಟ ಸಚಿವೆ!
Monday, July 11, 2022
ತ್ರಿಶ್ಶೂರ್: ಯುವಕನೋರ್ವನ ಮೂತ್ರಪಿಂಡ ಕಸಿ ಮಾಡಲು ಸಚಿವೆಯೋರ್ವರು ತಮ್ಮ ಚಿನ್ನದ ಬಳೆಯನ್ನೇ ನೀಡಿ ನೆರವಿನ ಹಸ್ತ ಚಾಚಿದ್ದಾರೆ.
ತ್ರಿಶ್ಶೂರ್ ನಲ್ಲಿ ಮೂತ್ರಪಿಂಡ ಕಸಿಗೆ ಸಂಬಂಧಿಸಿರುವ ವೈದ್ಯಕೀಯ ನೆರವು ಸಮಿತಿಯ ಸಭೆಯಲ್ಲಿ ಸಚಿವೆ ಬಿಂದು ಹಾಜರಿದ್ದರು. ಈ ವೇಳೆ ವಿವೇಕ್ ಪ್ರಭಾಕರ್ ಎಂಬ 27ವರ್ಷದ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದನ್ನು ಹೇಳಿದ್ದಾನೆ. ಆತನ ಪರಿಸ್ಥಿತಿಯನ್ನು ಕಂಡು ಮರುಗಿದ ಸಚಿವೆ ತಕ್ಷಣ ತಮ್ಮ ಕೈಯ್ಯಲ್ಲಿದ್ದ ಬಳೆಯನ್ನು ತೆಗೆದು ಕೊಟ್ಟಿದ್ದಾರೆ.
ವಿವೇಕ್ ಪ್ರಭಾಕರ್ ಗೆ ತಕ್ಷಣ ಕಿಡ್ನಿ ಕಸಿಯಾಗಬೇಕಿತ್ತು. ಆದರೆ ಹಣವಿಲ್ಲದೆ ಆತ ಕಿಡ್ನಿ ಕಸಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದೆ ಕೈಚೆಲ್ಲಿ ಕುಳಿತಿದ್ದ ಆತನ ಕುಟುಂಬಕ್ಕೆ ಸಚಿವೆ ಮೊದಲ ನೆರವು ನೀಡಿದ್ದಾರೆ. ಸಚಿವೆ ಬಿಂದು ಅವರ ಈ ನಡೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.