![ಚಿನ್ನದ ಮೇಲೆ ಹೂಡಿಕೆ ಸುರಕ್ಷಿತವೇ..? ನಿಮಗೆ ನೆರವು ನೀಡಬಲ್ಲ 5 ಕಾರಣಗಳು ಇಲ್ಲಿದೆ...!! ಚಿನ್ನದ ಮೇಲೆ ಹೂಡಿಕೆ ಸುರಕ್ಷಿತವೇ..? ನಿಮಗೆ ನೆರವು ನೀಡಬಲ್ಲ 5 ಕಾರಣಗಳು ಇಲ್ಲಿದೆ...!!](https://blogger.googleusercontent.com/img/b/R29vZ2xl/AVvXsEiKxIouKwjAJnAculBKjl4ClLANITgLuflspGCzDomo-p_PZAb_OqxU3FlhTOE9ft3dOO-gsAour0UNwbvieEXrHAz3SFnx3wauZUkWCusYHrPrM5igHMTjE0xNE6zb6CV-D8yxWjoUBaL0q7Qo6TO8ta1_DwQzM2NYMr3fFEfZfpj8TLgB4pCZDKi4/w640-h356/Stock%20Market.jpeg)
ಚಿನ್ನದ ಮೇಲೆ ಹೂಡಿಕೆ ಸುರಕ್ಷಿತವೇ..? ನಿಮಗೆ ನೆರವು ನೀಡಬಲ್ಲ 5 ಕಾರಣಗಳು ಇಲ್ಲಿದೆ...!!
ಚಿನ್ನದ ಮೇಲೆ ಹೂಡಿಕೆ ಸುರಕ್ಷಿತವೇ..? ನಿಮಗೆ ನೆರವು ನೀಡಬಲ್ಲ 5 ಕಾರಣಗಳು ಇಲ್ಲಿದೆ...!!
ಹಳದಿ ಲೋಹ ಎಂದೇ ಜನಜನಿತವಾಗಿರುವ ಚಿನ್ನ ಉತ್ತಮ ಉಳಿತಾಯದ ಆಸ್ತಿಯಾಗಿದೆ. ಹಳದಿ ಲೋಹದ ಮೇಲೆ ಹೂಡಿಕೆ ಕಷ್ಟಕಾಲಕ್ಕೆ ನೆರವಾಗುತ್ತದೆ. ಅಲ್ಲದೆ, ಇದೊಂದು ಅಮೂಲ್ಯ ಉಳಿತಾಯದ ದಾರಿಯಾಗುತ್ತದೆ....
ಚಿನ್ನದ ಮೇಲೆ ಹೂಡಿಕೆ ಸುರಕ್ಷಿತವೇ...? ಹೌದು ಎನ್ನುತ್ತಾರೆ ಆರ್ಥಿಕ ತಜ್ಞರು... ಇದಕ್ಕೆ ಅವರು ನೀಡಿದ ಐದು ಪ್ರಮುಖ ಕಾರಣಗಳು ಇಲ್ಲಿದೆ...
ನೀವು ಆರ್ಥಿಕ ಪರಿಣತರಾಗಿರಬೇಕಿಲ್ಲ
ಚಿನ್ನದಿಂದ ಉಳಿತಾಯವನ್ನು ಪ್ರಾರಂಭಿಸಲು ನೀವು ಆರ್ಥಿಕ ಪರಿಣತರಾಗಿರಬೇಕಿಲ್ಲ. ಹೂಡಿಕೆ ಯಾ ಉಳಿತಾಯಕ್ಕೆ ಅನೇಕ ಆಯ್ಕೆಗಳಿವೆ.. ಮತ್ತು ಅದಕ್ಕೆ ವಿಶೇಷ ಜ್ಞಾನದ ಅಗತ್ಯವಿದೆ. ಶೇರು ಹೂಡಿಕೆಗೆ ಆ ಕಂಪನಿಯ ಆರ್ಥಿಕತೆ, ಬ್ಯಾಲೆನ್ಸ್ ಶೀಟ್, ಈಗಿನ ಮೌಲ್ಯಮಾಪನ ಮತ್ತು ಭವಿಷ್ಯದ ಯೋಜನೆ ಅಧ್ಯಯನ ಮಾಡಬೇಕು. ಗಣತಿ ಪ್ರಕಾರ, 2021ರಲ್ಲಿ ಕೇವಲ ಶೇ. 3.4ರಷ್ಟು ಭಾರತೀಯರು ಶೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ...
ಮ್ಯೂಚ್ಯುವಲ್ ಫಂಡ್‌ಗೂ ಅದೇ ಅನ್ವಯಿಸುತ್ತದೆ. ಅಲ್ಲಿ ಅಪಾಯದ ಸಂಗತಿ ತೂಗಿಸಲು ವಿವಿಧ ಸೆಕ್ಟರ್‌ಗಳು, ಹಂಚಿಕೆಯ ವಿಧಾನವನ್ನು ಅರ್ಥ ಮಾಡುವುದು ಒಳ್ಳೆಯದು...
ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಜನ ತಮ್ಮ ಉಳಿತಾಯವನ್ನು ಚಿನ್ನದಲ್ಲಿ ತೊಡಗಿಸುತ್ತಾರೆ. ಪ್ರಾಚೀನ ಕಾಲದಲ್ಲಿ ನಾಣ್ಯಗಳನ್ನು ತಯಾರಿಸಲು ಚಿನ್ನ ಬಳಸಲಾಗುತ್ತಿತ್ತು. ಆಭರಣಗಳ ರೂಪದಲ್ಲೂ ಇದು ಒಂದು ಸಂಪತ್ತೇ ಸರಿ... ಧನಿಕನಿರಲಿ, ಬಡವನಿರಲಿ, ಒಬ್ಬ ವ್ಯಕ್ತಿ ಯಾ ರಾಷ್ಟ್ರ, ಪ್ರತಿಯೊಬ್ಬರಿಗೂ ಅಂತರ್ಗತವಾಗಿ ಚಿನ್ನದ ಮೌಲ್ಯ ತಿಳಿದೇ ಇದೆ...
ಡಿಜಿಟಲ್ ಚಿನ್ನ
ಡಿಜಿಟಲ್ ಚಿನ್ನವನ್ನು ಒಂದು ಬಟನ್‍ನ ಸರಳ ಕ್ಲಿಕ್ ಮೂಲಕ ಯಾರಾದರೂ ಎಲ್ಲಿ ಬೇಕಾದರೂ ಖರೀದಿ ಮಾಡಬಹುದು. ನೀವು ಗೋಲ್ಡ್ ಖರೀದಿಸಬೇಕೆಂದರೆ ಅದನ್ನು ಅಧ್ಯಯನ ಮಾಡಲು ಯಾ ಅರ್ಥ ಮಾಡಿಕೊಳ್ಳಲು ಯಾವುದೇ ಸಂಕೀರ್ಣ ನಿಯಮಗಳು ಮತ್ತು ಷರತ್ತುಗಳಿಲ್ಲ.
ಖರೀದಿದಾರರಿಗೆ ಅಗತ್ಯವಾಗಿ ಬೇಕಾಗಿರುವುದು ಫೋನ್ ಮತ್ತು ಪೇಟಿಎಂ ಜಿಪೇ, ಫೋನ್ ಪೇ ಅಥವಾ ಸೂಕ್ಷ್ಮ ಉಳಿತಾಯ ಆಪ್ ಸಿಪ್ಲಿನಂತಹ ಫಿನ್‍ಟೆಕ್ ಅಪ್ಲಿಕೇಶನ್‌ಗಳು. 'ಸಿಪ್ಲಿ' ಥರದ ಮೈಕ್ರೋ ಸೇವಿಂಗ್ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಕನಿಷ್ಟ ಅರ್ಧ ಗ್ರಾಂ, ಒಂದು ಗ್ರಾಮ್ ಮೊದಲಾದ ಅಲ್ಪ ಮೊತ್ತಕ್ಕೆ 24 ಕ್ಯಾರೆಟ್ ಚಿನ್ನ ಕೊಳ್ಳಲು ಅವಕಾಶ ನೀಡಿದೆ. ಅದೂ ಗ್ರಾಮ್‌ವೊಂದಕ್ಕೆ ರೂ. 4500/-ಗಳ ಸ್ಥಿರ ದರದಲ್ಲಿ...
ಡಿಜಿಟಲ್ ಚಿನ್ನಕ್ಕೆ ಇದೆ ಹೆಚ್ಚಿನ ಲಿಕ್ವಿಡಿಟಿ ಮೌಲ್ಯ
ಉಳಿತಾಯ ಉತ್ಪನ್ನ ಶ್ರೇಣಿಯನ್ನು ಸೃಷ್ಟಿಸುವಾಗ ನಿಮ್ಮ ಹೂಡಿಕೆ ಎಷ್ಟು ಲಿಕ್ವಿಡಿಟಿ ಹೊಂದಿದೆ ಎಂಬುದನ್ನು ನೋಡುವುದು ಬಹಳ ಮುಖ್ಯ. ಯಾವುದೇ ಸಂದರ್ಭದಲ್ಲೂ ನಮ್ಮ ಆರ್ಥಿಕ ಆಸ್ತಿಯನ್ನು ಕ್ಯಾಶ್ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು 'ಲಿಕ್ವಿಡಿಟಿ' ಎನ್ನಬಹುದು.
ಉದಾಹರಣೆಗೆ, ಮನೆಯು ಲಿಕ್ವಿಡಿಟಿ ಇರುವ ಆಸ್ತಿಯಲ್ಲ. ಅಗತ್ಯದ ಸಂದರ್ಭದಲ್ಲಿ, ಮನೆಯನ್ನು ನಿಂತಲ್ಲೇ ತಕ್ಷಣ ಮಾರಾಟ ಮಾಡಲು ಸಾಧ್ಯವಿಲ್ಲ... ಇತರ ಹೂಡಿಕೆಗಳಾದ ಸೇವಿಂಗ್ಸ್ ಭದ್ರತಾ ಠೇವಣಿಗಳು, ಬಾಂಡ್‌ಗಳು, ಫಿಕ್ಸೆಡ್ ಡೆಪಾಸಿಟ್, ಮತ್ತು ಮ್ಯೂಚ್ಯುವಲ್ ಫಂಡ್‍ಗಳಂತಹ ಇತರ ಉಳಿತಾಯ ಮತ್ತು ಹೂಡಿಕೆ ಆಯ್ಕೆಗಳು ಲಾಕ್‌ನಿಂದ ಕೂಡಿರುತ್ತವೆ. ಸಂಕೀರ್ಣ ಸಮಸ್ಯೆ ಇರುತ್ತವೆ.
ಅಗತ್ಯದ ತುರ್ತು ಸಂದರ್ಭಗಳಲ್ಲಿ ಹಣ ಹೊಂದಿಸುವುದು ಸುಲಭ!
ಅಗತ್ಯದ ಸಂದರ್ಭಗಳಲ್ಲಿ, ಹಣದ ತುರ್ತು ಪರಿಸ್ಥಿತಿಯಲ್ಲಿ ಹಣ ಹೊಂದಿಸುವುದು ಎಂಥವರಿಗೂ ಕಷ್ಟ. ಆದರೆ, ಮನೆಯಲ್ಲಿ ಇದ್ದರೆ ಚಿನ್ನ... ಚಿಂತೆಯು ಏತಕೆ ಎಂಬ ವಾಕ್ಯ ನೆನಪಾಗುತ್ತದೆ. ಎಂಥದ್ದೇ ಸಮದಯ್ಲಲೂ, ನಿಮ್ಮ ಮೊಬೈಲ್ ಬಳಸಿ ಚಿನ್ನಕ್ಕೆ ಸಮನಾದ ಮೌಲ್ಯಕ್ಕೆ ನಿಮ್ಮ ಹಳದಿ ಲೋಹವನ್ನು ನಗದಾಗಿ ಪರಿವರ್ತಿಸಬಹುದು. ಪ್ರಸಕ್ತ ಚಿನ್ನದ ಮಾರುಕಟ್ಟೆ ಬೆಲೆಯಲ್ಲೇ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ತಕ್ಷಣವೇ ಜಮಾ ಮಾಡಲಾಗುತ್ತದೆ.
ಡಿಜಿಟಲ್ ಚಿನ್ನ ಬಯಸದೇ ಇದ್ದ ಖರೀದಿದಾರರು ಡಿಜಿಟಲ್ ಚಿನ್ನವನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಬಹುದು. ಪ್ರಮುಖ ಜ್ಯುವೆಲ್ಲರಿ ಮಳಿಗೆಗಳು ತನ್ನ ಗ್ರಾಹಕರಿಗೆ ಡಿಜಿಟಲ್ ಚಿನ್ನವನ್ನು ಸಹ ನೀಡುತ್ತದೆ.. ಅದನ್ನು ಭಾರತದಲ್ಲಿನ ಅವರ ಅಂಗಡಿಗಳಲ್ಲಿ ಅದರ ಭೌತಿಕ ರೂಪಕ್ಕಾಗಿ ವಿನಿಮಯ ಮಾಡಿಕೊಳ್ಳಬಹುದು.
ಅಪ್ಲಿಕೇಶನ್‌ಗಳು ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ನಿಮ್ಮ ಮನೆ ಬಾಗಿಲಿಗೆ ಚಿನ್ನದ ವಿತರಣೆಯನ್ನು ನೀಡುತ್ತವೆ. ಈ ರೀತಿಯಾಗಿ ಚಿನ್ನವನ್ನು ಪಡೆಯುವ ಜಂಜಾಟದಿಂದ ನೀವು ಪಾರಾಗಬಹುದು.
ಕೇವಲ 1 ರೂ. ಕನಿಷ್ಠ ದರದಲ್ಲಿ ಚಿನ್ನದ ಉಳಿತಾಯ
ವೈಯಕ್ತಿಕವಾಗಿ ಆರ್ಥಿಕ ಪರಿಸ್ಥಿತಿ ಎಂತದ್ದೇ ಇದ್ದರೂ, ಉಳಿತಾಯವನ್ನು ನಿಲ್ಲಿಸುವ ಅಗತ್ಯವಿಲ್ಲ. ಮೈಕ್ರೋ ಸೇವಿಂಗ್ ಅಪ್ಲಿಕೇಶನ್‌ಗಳೊಂದಿಗೆ, ಬಳಕೆದಾರರು 1 ರೂ.ಗೆ ಚಿನ್ನದ ಉಳಿತಾಯವನ್ನು ಖರೀದಿ ಪ್ರಾರಂಭಿಸಬಹುದು. ಅದನ್ನು ದಿನಂಪ್ರತಿ, ವಾರ ಯಾ ತಿಂಗಳ ಅಂತರದಲ್ಲಿ ಇಷ್ಟು ಹಣವನ್ನು ಚಿನ್ನದ ಮೇಲಿನ ಹೂಡಿಕೆಯಾಗಿ ಆಯ್ಕೆ ಮಾಡಬಹುದು.
ಸಮಯ ಕಳೆಯುತ್ತಲೇ, ನಿಮ್ಮ ಹೂಡಿಕೆ ದೊಡ್ಡ ಮೊತ್ತ ಯಾ ಆಸ್ತಿಯಾಗಿ ಪರಿವರ್ತನೆಯಾಗುವುದು. ಇದೊಂದು ಸುರಕ್ಷಿತ ಹೂಡಿಕೆಯೂ ಆಗಿರುತ್ತದೆ. ಡಿಜಿಟಲ್ ಚಿನ್ನವು ಚಿನ್ನದ ಶುದ್ಧ ರೂಪವಾಗಿದೆ ಮತ್ತು BIS ಪ್ರಮಾಣೀಕೃತವಾಗಿರುತ್ತದೆ.
ಶಾಶ್ವತತೆಗಾಗಿ ಚಿನ್ನ
ಅನೇಕ ಆರ್ಥಿಕ ಉಳಿತಾಯ ಯೋಜನೆಗಳು 'ದಿವಾಳಿತನ'ದ ಗುಪ್ತ ಅಪಾಯ ಹೊಂದಿದೆ. ಶೇರುಗಳು ಯಾ ಈಕ್ವಿಟಿಯನ್ನೇ ನೋಡೋಣ... ಅತಿಯಾದ ಸಾಲ, ವಂಚನೆ, ವ್ಯಾಪಾರಿ ನಷ್ಟದಿಂದಾಗಿ, ಕಂಪನಿಗಳು ಇದ್ದಕ್ಕಿದ್ದಂತೆ ದಿವಾಳಿಯಾಗಬಹುದು. ಇದಕ್ಕೆ ಅನೇಕ ಉದಾಹರಣೆಗಳು ಇವೆ... ರಾತ್ರೋರಾತ್ರಿ ದಿವಾಳಿಯಾಗುವ ಕಂಪನಿಗಳಲ್ಲಿ ಹೂಡಿಕೆದಾರರು ಇಟ್ಟಿರುವ ಉಳಿತಾಯ ಸಂಪೂರ್ಣವಾಗಿ ನಾಶವಾಗಿವೆ.
ಇತ್ತೀಚೆಗೆ ಭಾರೀ ಪ್ರಚಾರ ಪಡೆದ ಕ್ರಿಪ್ಟೋ ಕರೆನ್ಸಿಗಳೂ ಚಂಚಲಶೀಲವಾಗಿವೆ. ಬಿಟ್‍ಕಾಯಿನ್ 2021ರ ನವೆಂಬರ್ ನಲ್ಲಿ ಸಾರ್ವಕಾಲಿಕ ಗರಿಷ್ಠ 68,000/- ಡಾಲರ್ ತಲುಪಿತು. ಈಗ, ಇದು ಸುಮಾರು 21,000 ಡಾಲರ್‌ಗೆ ಇಳಿದಿದೆ. 69%ರಷ್ಟು ಕುಸಿತ ಕಂಡಿದೆ. ವಸತಿ ಕ್ಷೇತ್ರ, ರಿಯಲ್ ಎಸ್ಟೇಟ್ ಕೂಡ ಕುಸಿತ ಕಂಡಿದೆ.
ಇನ್ನೊಂದೆಡೆ, ಚಿನ್ನದ ಮೌಲ್ಯ ಸ್ಥಿರ ಮತ್ತು ವಿಶ್ವಾಸಾರ್ಹವಾಗಿದೆ. ಕಾಲಾನಂತರದಲ್ಲಿ ಅದರ ಮೌಲ್ಯವು ಪ್ರಶಂಸಿಸಲ್ಪಡುತ್ತದೆ...
ಚಿನ್ನ ಇದ್ದರೆ ಹಣದುಬ್ಬರವನ್ನೂ ಎದುರಿಸಬಹುದು.
1971 ರಿಂದ ಚಿನ್ನವು 10% ಕರೆನ್ಸಿ ಗ್ಯಾರಂಟಿ ರಿಟರ್ನ್ CGR ಹಿಂದಿರುಗಿಸಿದೆ. ಇತರ ಹೂಡಿಕೆಗೆ ಹೋಲಿಸಿದರೆ, ಇದು ಎಲ್ಲ ಆಯ್ಕೆಗಳನ್ನು ಮೀರಿಸಿದೆ.. ಉದಾ: US ಖಜಾನೆ ಬಾಂಡ್‍ಗಳಿಂದ ಸರಕುಗಳು ಮತ್ತು ಅಭಿವೃದ್ಧಿ ಹೊಂದಿದ ಶೇರು ಮಾರುಕಟ್ಟೆ ವರೆಗೆ...
ಅದೇನೆಂದರೆ, ಕರೆನ್ಸಿಗಳು ಸವಕಳಿಯಾಗಿ ಮೌಲ್ಯ ಕಳೆದುಕೊಂಡರೂ, ಚಿನ್ನವು ಮೌಲ್ಯದ ವಿಶ್ವಾಸಾರ್ಹ ಉಳಿತಾಯದ ಮೂಲವಾಗಿ ನಿಲ್ಲುತ್ತದೆ. ವಿಶ್ವಾದ್ಯಂತ ದೇಶಗಳು ಹಣದುಬ್ಬರ ಹಾಗೂ ಆರ್ಥಿಕ ಸಂಕಷ್ಟ ಎದುರಿಸಲು ಅಸ್ತ್ರವಾಗಿ ಚಿನ್ನದ ನಿಕ್ಷೇಪವನ್ನು ಹೊಂದಿವೆ..
ಆರ್ಥಿಕ ತಜ್ಞರ ಪ್ರಕಾರ, ನೀವು ನಿಮ್ಮ ಉಳಿತಾಯದ ಕನಿಷ್ಠ 5-10% ಅನ್ನು ಚಿನ್ನಕ್ಕೆ ವಿನಿಯೋಗಿಸಬಹುದು. ಅದೇ ರೀತಿ, ಡಿಜಿಟಲ್ ಚಿನ್ನ ನಿಮ್ಮ ಉಳಿತಾಯಕ್ಕೆ ವೇಗ ನೀಡಲು ಮತ್ತು ಹಣದುಬ್ಬರದ ಆತಂಕ ನಿವಾರಿಸಲು ನಿಶ್ಚಿಂತ ಮಾರ್ಗವಾಗಿದೆ.