Health Tips: 40 ದಾಟಿದವರು ತಪ್ಪದೆ ಓದಿ... ಪುರುಷರು ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ ?
Health Tips: 40 ದಾಟಿದವರು ತಪ್ಪದೆ ಓದಿ... ಪುರುಷರು ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ ?
ಪ್ರಾಯ ಹೆಚ್ಚಾಗುತ್ತಿದ್ದಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಮುಖ್ಯ. ಹಿತ ಮಿತವಾದ ಉತ್ತಮ ಆಹಾರ ಸೇವನೆ, ಡಯೆಟ್, ವ್ಯಾಯಾಮ... ಇವೆಲ್ಲಾ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ ಆರೋಗ್ಯವು ಉತ್ತಮವಾಗಿರಬೇಕು ಎನ್ನುವ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ.
ಸಾಮಾನ್ಯವಾಗಿ ಪುರುಷರು ಸದಾ ಒತ್ತಡದಲ್ಲಿ ಇರುತ್ತಾರೆ. ದುಃಖ ಭಯ... ಇರುತ್ತದೆ. ಸಮಾಜ, ಕುಟುಂಬದ ನಿರೀಕ್ಷೆ ಪುರುಷರ ಮೇಲೆ ಅಪಾರವಾಗಿರುತ್ತದೆ.. ಹಾಗಾಗಿ, ಅವರು ನಿತ್ಯ ಒತ್ತಡದ ಜೀವನ ನಡೆಸುತ್ತಿರುತ್ತಾರೆ. .ಆರೋಗ್ಯದ ಕಾಳಜಿ ವಹಿಸುವ ಮನಸ್ಸು ಮಾಡಿದರೂ ಪಾಲಿಸಲಾಗುತ್ತಿಲ್ಲ. ಅಂಥವರಿಗೆ ಇಲ್ಲಿದೆ ಸುಲಭ ಟಿಪ್ಸ್... ಒತ್ತಡ ಬದಿಗಿಟ್ಟು ಆರೋಗ್ಯದ ಕಾಳಜಿ ವಹಿಸಲು ಇದೇ ಸುಸಮಯ.
40 ದಾಟಿದವರು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
'ಫೈಬರ್'ಯುಕ್ತ ಆಹಾರ ಸೇವಿಸಿ:
'ಫೈಬರ್' ಯುಕ್ತ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಫೈಬರ್ ಯುಕ್ತ ಹೃದಯ
ಸಂಬಂಧಿ ಕಾಯಿಲೆ, ಟೈಪ್ 2 ಮಧುಮೇಹದ ಅಪಾಯ ತಗ್ಗಿಸುತ್ತದೆ. .ಬಟಾಣಿ, ಮಸೂರ, ಬಿಳಿ ಎಳ್ಳು, ಅಗಸೆ ಬೀಜ, ಕುಂಬಳಕಾಯಿ ಬೀಜ, ಓಟ್ಸ್, ಬಾದಾಮಿ, ಗೋಡಂಬಿ ಮತ್ತು ಪಾಲಿಶ್ ಮಾಡದ ಅಕ್ಕಿಯಲ್ಲಿ ಹೆಚ್ಚು ಫೈಬರ್ ಅಂಶ ಇದೆ.
-ಸೋಡಿಯಂ- ಅಂಶವಿರುವ ಆಹಾರದ ಬಳಕೆ ಕಡಿಮೆ ಮಾಡಿ:
ಆಹಾರದಲ್ಲಿ 'ಸೋಡಿಯಂ' ಅಂಶ ಸೇವನೆ ಕಡಿಮೆ ಮಾಡಿ. ಬೇಳೆ, ಹಣ್ಣು ಹಾಗೂ ಪಾಲಕ್ ಸೊಪ್ಪಿನ ಸೇವನೆ ಹೆಚ್ಚಿಸಿ ಪೊಟ್ಯಾಶಿಯಂ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ.
ಕೊಬ್ಬು ಯುಕ್ತ ಆಹಾರ ಸೇವನೆ ಕಡಿಮೆ ಮಾಡಿ:
Read Meat (ಮಾಂಸ), ಹಾಲು ಹಾಗೂ ಇತರ ಡೈರಿ ಪ್ರಾಡಕ್ಟ್ಸ್ ಗಳಲ್ಲಿ ಇರುವ ಸ್ಯಾಚುರೇಟೆಡ್ ಕೊಬ್ಬು ಬಳಕೆ ಕಡಿಮೆ ಮಾಡಿ. ಸಾಧ್ಯವಿದ್ದರೆ, ಹಸುವಿನ ತುಪ್ಪ ಸೇವಿಸಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕರಿಮೆಣಸು, ದಾಲ್ಚಿನ್ನಿ, ಲವಂಗ ಮತ್ತು ಒಣ ಶುಂಠಿಯನ್ನು ಬಳಕೆ ಮಾಡಿ.
ಗಿಡಮೂಲಿಕೆಗಳನ್ನು ಬಳಸಿ:
ತುಳಸಿ, ಯಷ್ಟಿಮಧು, ಅಶ್ವಗಂಧ, ಮತ್ತು ಒಣ ಶುಂಠಿಯಂತಹ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಹಾಗೆಯೇ ಜೀರಿಗೆ, ಧನಿಯಾ, ಅರಿಶಿನ, ಕಪ್ಪು ಜೀರಿಗೆ, ಕರಿಮೆಣಸು, ದಾಲ್ಚಿನ್ನಿ, ಮತ್ತು ಲವಂಗಗಳಂತಹ ಮಸಾಲೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ.
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ:
ಕರುಳಿನ ಆರೋಗ್ಯವನ್ನು ಕಾಪಾಡುವ ಆಹಾರವನ್ನು ಸೇವನೆ ಮಾಡಿ, ಉತ್ತಮವಾಗಿ ಜೀರ್ಣವಾಗಬಲ್ಲ ಆಹಾರ ಸೇವಿಸಿ.
ಈ ಬರಹ ಕೇವಲ ಉತ್ತಮ ಚಿಕಿತ್ಸೆಗಾಗಿ ಮತ್ತು ಇಲ್ಲಿ ಬರುವ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ಉಪಯೋಗಕ್ಕೆ ಬರಬೇಕಾದರೆ ತಪ್ಪದೇ ಸೂಕ್ತ ವೈದ್ಯರನ್ನು ಸಂಪರ್ಕಿಸಿ ನಂತರ ಮಾಹಿತಿಯ ಅನುಗುಣವಾಗಿ ಉಪಯೋಗಿಸಿ...