-->
Health Tips : ದೇಹ ತೂಕ ಹೆಚ್ಚಿದೆಯೇ..? ಇಲ್ಲಿದೆ ಸುಲಭ ಉಪಾಯ- ಮನೆಯಲ್ಲೇ ದೇಹ ತೂಕ ಕಡಿಮೆ ಮಾಡಿಕೊಳ್ಳಿ

Health Tips : ದೇಹ ತೂಕ ಹೆಚ್ಚಿದೆಯೇ..? ಇಲ್ಲಿದೆ ಸುಲಭ ಉಪಾಯ- ಮನೆಯಲ್ಲೇ ದೇಹ ತೂಕ ಕಡಿಮೆ ಮಾಡಿಕೊಳ್ಳಿ

ದೇಹ ತೂಕ ಹೆಚ್ಚಿದೆಯೇ..? ಇಲ್ಲಿದೆ ಸುಲಭ ಉಪಾಯ- ಮನೆಯಲ್ಲೇ ದೇಹ ತೂಕ ಕಡಿಮೆ ಮಾಡಿಕೊಳ್ಳಿ






ಎಲ್ಲರಿಗೂ ಸ್ಲಿಮ್ ಆಗಿರಬೇಕು, ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕು ಅಥವಾ ಫಿಟ್ ಆಗಿ ಆರೋಗ್ಯಕರವಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ.



ಆದರೆ, ಆ ಆಸೆ ಇದ್ದರೆ ಸಾಲದು, ಅದನ್ನು ಸಾಧಿಸುವ ಛಲವೂ ಬೇಕು. ಅದಕ್ಕಾಗಿ, ದೇಹಕ್ಕೆ ಸೂಕ್ತ ಹಾಗೂ ನಿಯಮಿತವಾದ ವ್ಯಾಯಾಮದ ಅಗತ್ಯವೂ ಇರುತ್ತದೆ.



ದೇಹದ ವ್ಯಾಯಾಮಕ್ಕೆ ಜಿಮ್‌ಗೆ ಹೋಗೋದು ಅಂದರೆ ಕೆಲವರಿಗೆ ಆಲಸ್ಯ. ಇನ್ನು ಕೆಲವರಿಗೆ ಸಮಯದ ಅಭಾವ.. ಹಣದ ಕೊರತೆ ಇರುತ್ತದೆ.



ಜಿಮ್‌ಗೆ ಹೋಗದಿದ್ದರೂ ತೂಕ ಇಳಿಸಿಕೊಳ್ಳುವುದು ಹೇಗೆ ? ಫಿಟ್ ಆಗಿರುವುದು ಹೇಗೆ? ಮನೆಯಲ್ಲೇ ಇದ್ದೂ ಇದನ್ನು ಸಾಧಿಸಬಹುದು... ಮನೆಗೆ ಸಂಬಂಧಿಸಿದ ನಿತ್ಯಕೆಲಸಗಳನ್ನು ನೀವೇ ಮಾಡಿಕೊಳ್ಳುವುದರಿಂದ ಇದು ಸಾಧ್ಯವಿದೆ.



ಅಂತಹ ಕೆಲಸಗಳ ಕಿರು ಪಟ್ಟಿ ಇಲ್ಲಿ ಮಾಡಲಾಗಿದೆ.


ಅಂಗಳ ಗುಡಿಸುವುದು... ಮನೆಯನ್ನು ಸ್ವಚ್ಚ ಮಾಡುವುದು.. ಪೀಠೋಪಕರಣ ಸ್ವಚ್ಚತೆ, ಸೀಲಿಂಗ್ ಕ್ಲೀನ್ ಮಾಡೋದು ಇತ್ಯಾದಿ ಪ್ರತಿನಿತ್ಯ ಒಂದು ಗಂಟೆ ಕಾಲ ಮಾಡಿದರೆ, ಅದು ನಿಮ್ಮ ದೇಹಕ್ಕೆ ವ್ಯಾಯಾಮ ನೀಡುತ್ತದೆ ಹಾಗೂ ದೇಹದಲ್ಲಿ ಅನಗತ್ಯ ಬೊಜ್ಜು ಉತ್ಪತ್ತಿ ಆಗದಂತೆ ತಡೆಯುತ್ತದೆ ಹಾಗೂ ಇದ್ದ ಬೊಜ್ಜನ್ನು ಕರಗಿಸುತ್ತದೆ. ಇಂತಹ ಕೆಲಸಗಳು ಪ್ರತಿ ಗಂಟೆಯಲ್ಲಿ 230 ಕ್ಯಾಲೋರಿಗಳನ್ನು ಕರಗಿಸುತ್ತದೆ.


'ಧೂಳು' ತೆಗೆಯುವುದು: ಧೂಳು ಮುಕ್ತ ಮನೆ ಮತ್ತು ಕ್ಯಾಲೋರಿ ಮುಕ್ತ ದೇಹ ಎರಡೂ ಕೂಡ ನೆಮ್ಮದಿ ನೀಡುತ್ತದೆ... ಈ ಎರಡನ್ನೂ ನೀವು ಹೊಂದಲು ಸಾಧ್ಯವಿದೆ. ಒಂದು ಗಂಟೆಯ ಕಾಲ ನಿಮ್ಮ ಮನೆಯ ಕಿಟಕಿ, ಪೀಠೋಪಕರಣಗಳು ಇತ್ಯಾದಿಗಳ ಧೂಳು ಹೊಡೆದು ಸ್ವಚ್ಚ ಮಾಡಿ. ಇದು ನಿಮ್ಮ ದೇಹದ 240 ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.


ಪೇಂಟಿಂಗ್‌: ನಿಮ್ಮ ಮನೆಯ ಗೋಡೆಯ ಅದೇ ಹಳೆಯ ಬಣ್ಣಗಳನ್ನು ನೋಡಿ ಸಾಕಾಗಿ ಹೋಗಿದೆಯೇ? ಹಾಗಾದರೆ, ಕೆಲಸಗಾರರನ್ನು ನಿಯೋಜಿಸುವುದು ಖರ್ಚಿಗೆ ದಾರಿ. ನಿಮ್ಮ ಮನೆಯ ಗೋಡೆಗಳಿಗೆ ನೀವೇ ಪೈಂಟಿಂಗ್ ಮಾಡಬಹುದು. ಮನೆಯ ಗೋಡೆಗಳಿಗೆ ಬಣ್ಣ ಹೊಡೆಯುವ ಕೆಲಸ ಕೈಗೆತ್ತಿಕೊಳ್ಳುವುದು ಮತ್ತು ಆ ಮೂಲಕ ತೂಕವನ್ನು ಕೂಡ ಇಳಿಸಿಕೊಳ್ಳುವುದು ಉತ್ತಮ ಆಲೋಚನೆ. ಈ ಕೆಲಸದಿಂದ ನೀವು ಗಂಟೆಗೆ 306 ಕ್ಯಾಲರಿಗಳನ್ನು ಕರಗಿಸಬಹುದು.


ಬಟ್ಟೆ ಒಗೆಯುವುದು: ವಾಶಿಂಗ್ ಮೆಶಿನ್‍ನಲ್ಲಿ ಬಟ್ಟೆಗಳನ್ನು ಒಗೆಯುವುದು ಸುಲಭ ನಿಜ. ಆದರೆ, ಕೈಯಲ್ಲೇ ಬಟ್ಟೆ ಒಗೆದುಕೊಳ್ಳುವುದು ಮನಸ್ಸಿಗೂ ಉಲ್ಲಾಸ, ದೇಹಕ್ಕೂ ವ್ಯಾಯಾಮ. ಇದು ಕಷ್ಟವೆನಿಸಿದರೂ ದೇಹದ ಬೊಜ್ಜು ಕರಗಿಸಲು ಸಹಕಾರಿ.

'ವರ್ಕೌಟ್' ಮಾಡಲು ಆಲಸ್ಯತನ ಕಾಡಿದರೆ, ಮನೆಯಲ್ಲೇ ಬಟ್ಟೆ ಒಗೆದು ತೂಕ ಇಳಿಸಿಕೊಳ್ಳಿ. ಬಟ್ಟೆ ಒಗೆಯುವುದರಿಂದ ಗಂಟೆಗೆ 90ರಿಂದ 120 ಕ್ಯಾಲರಿಗಳನ್ನು ಕರಗಿಸಿಕೊಳ್ಳಬಹುದು.


ಮಗುವಿನ ಆರೈಕೆ..: ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ..? ಆ ಕಾರಣದಿಂದ ಜಿಮ್ ಗೆ ಹೋಗಲು ಟೈಮ್ ಇಲ್ಲವೇ...? ಹಾಗಾದರೆ, ಚಿಂತಿಸುವ ಅಗತ್ಯವೇ ಇಲ್ಲ. ಮಕ್ಕಳ ಜೊತೆಗೆ ಆಟವಾಡುವುದು, ಮಗುವನ್ನು ಆರೈಕೆ ಮಾಡುವುದು ಒಂದು ಉತ್ತಮ ವ್ಯಾಯಾಮ. ಮಕ್ಕಳ ಜೊತೆಗೆ ಆಟವಾಡಿದರೆ, ಮಗುವನ್ನು ಕೇರಿಂಗ್ ಮಾಡಿದರೆ ಮನಸ್ಸಿಗೂ ಖುಷಿ ಕೊಡುತ್ತದೆ, ವ್ಯಾಯಾಮವೂ ಆಗುತ್ತದೆ. ಇದು ಗಂಟೆಗೆ 204 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು.


ಪಾತ್ರೆ ತೊಳೆಯುವುದು.: ಮನೆಯ ಪಾತ್ರೆಗಳನ್ನು ತೊಳೆಯುವುದು ಒಂದು ಸರಳ ವ್ಯಾಯಾಮ. ದೇಹದ ತೂಕವನ್ನು ದೊಡ್ಡ ಮಟ್ಟದಲ್ಲಿ ಕಳೆದುಕೊಳ್ಳಲು ಪಾತ್ರೆಗಳನ್ನು ತೊಳೆಯುವುದರಿಂದ ಸಾಧ್ಯವಿಲ್ಲ. ಆದರೆ, ಸುಲಭವಾಗಿ ಮಾಡಬಹುದಾದ ವ್ಯಾಯಾಮವೂ ಹೌದು. ಪಾತ್ರೆ ತೊಳೆಯೋದರಿಂದ ಪ್ರತಿ ಗಂಟೆಗೆ 105 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.


ಲಾನ್‍ನಲ್ಲಿ ಕಟಾವು ಮಾಡಿ

ಹರಿತವಾದ ಕತ್ತರಿ/ಬ್ಲೇಡ್‌ ಬಳಸಿ ಲಾನ್‍ನಲ್ಲಿ ಕಟಾವು ಮಾಡುವುದರಿಂದ ಗಂಟೆಗೆ 374 ಕ್ಯಾಲೋರಿಗಳನ್ನು ಕರಗಿಸಿಕೊಳ್ಳಬಹುದು. ಲ್ಯಾಂಡ್ ಮೂವರ್ ಜೊತೆಗೆ ನಡೆಯುತ್ತಾ, ಕಟಾವು ಮಾಡಿದರೆ ಗಂಟೆಗೆ 308 ಕ್ಯಾಲೋರಿಗಳನ್ನು ಕರಗಿಸಲು ಸಾಧ್ಯವಿದೆ.


ವ್ಯಾಕ್ಯೂಮ್ ಕ್ಲೀನಿಂಗ್: ಇಡೀ ಮನೆಯನ್ನು ವ್ಯಾಕ್ಯೂಮ್ ಕ್ಲೀನಿಂಗ್ ಮಾಡುವುದಕ್ಕೆ ಒಂದು ಗಂಟೆ ನೀಡಿದರೆ ಅದೂ ಒಂದು ವ್ಯಾಯಾಮವೇ.. ಅದರಿಂದ ನೀವು ಗಂಟೆಗೆ 283 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.


ತೋಟಗಾರಿಕೆ (ಗಾರ್ಡನಿಂಗ್): ತೋಟಗಾರಿಕೆ ಹೂಗಿಡಗಳ ಆರೈಕೆಯೂ ಒಂದು ಉತ್ತಮ ವ್ಯಾಯಾಮ. ಇದು ದೇಹ ಮತ್ತು ಮನಸ್ಸು ಎರಡಕ್ಕೂ ಉಲ್ಲಾಸ, ಚೈತನ್ಯ ನೀಡುತ್ತದೆ. ಹಿತ್ತಲಿನ ಕೈತೋಟದಲ್ಲಿ ಗಿಡಗಳ ಆರೈಕೆಗೆ ಎಂದು ವಾರದಲ್ಲಿ ಒಂದೆರಡು ಬಾರಿ ಎರಡು ಗಂಟೆಗಳನ್ನು ವ್ಯಯಿಸಿದರೆ ಸಾಕು, 400ರಿಂದ 500 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.


ಫ್ಲೋರ್ ಕ್ಲೀನಿಂಗ್: ಮನೆಯ ನೆಲ ಒರೆಸುವುದು ದಿನಾ ಮಾಡಬಹುದಾದ ಸುಲಭ ವ್ಯಾಯಾಮ. ನಿಮ್ಮ ಅಂಗಳ ಗುಡಿಸುವುದು, ನೆಲ ಒರೆಸುವುದು ಸಾಮಾನ್ಯವಾಗಿ ಎಲ್ಲರೂ ಖುಷಿಯಿಂದ ಮಾಡಬಹುದು. ಇದರಿಂದ ಗಂಟೆಗೆ 250 ಕ್ಯಾಲರಿಗಳನ್ನು ಕರಗಿಸಬಹುದು. ಅದು ನಿಮ್ಮ ಕೈಕಾಲುಗಳಿಗೂ ದೃಢತೆ ನೀಡುತ್ತದೆ. 

Ads on article

Advertise in articles 1

advertising articles 2

Advertise under the article