ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತವಾಗಿ ಯುವ ಇಂಜಿನಿಯರ್ ಸಾವು
Tuesday, July 12, 2022
ಧಾರವಾಡ: ಕಾರು ಚಲಾಯಿಸುತ್ತಿರುವಾಗಲೇ ಯುವ ಇಂಜಿನಿಯರ್ ಓರ್ವರು ಹೃದಯಾಘಾತವಾಗಿ ಮೃತಪಟ್ಟ ದುರ್ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕರ್ಲವಾಡದಲ್ಲಿ ನಡೆದಿದೆ.
ಧಾರವಾಡ ಜಿಪಂ ಇಂಜಿನಿಯರ್, ನವಲಗುಂದ ತಾಲೂಕಿನ ಲೋಕನಾಥ ಗುತ್ತಲ್(29) ಮೃತಪಟ್ಟ ದುರ್ದೈವಿ.
ಲೋಕನಾಥ ಗುತ್ತಲ್ ಅವರು ಹುಬ್ಬಳ್ಳಿಯಿಂದ ನವಲಗುಂದ ತಾಲೂಕಿಗೆ ಕರ್ತವ್ಯದ ಮೇಲೆ ತೆರಳಿದ್ದರು. ಆದರೆ ದಾರಿಮಧ್ಯೆ ಇವರಿಗೆ ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿಯೇ
ಹೃದಯಾಘಾತಗೊಂಡಿದೆ. ಪರಿಣಾಮ ಇವರ ಕಾರು ತೋಟಕ್ಕೆ ನುಗ್ಗಿ ನಿಂತಿದೆ. ಲೋಕನಾಥ ಗುತ್ತಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.