![ಮಂಗಳೂರು: ಗುಡುಗು - ಮಿಂಚು ಸಹಿತ ಭಾರೀ ಮಳೆ; ಶಾಲೆಗಳಿಗೆ ರಜೆ ಮಂಗಳೂರು: ಗುಡುಗು - ಮಿಂಚು ಸಹಿತ ಭಾರೀ ಮಳೆ; ಶಾಲೆಗಳಿಗೆ ರಜೆ](https://blogger.googleusercontent.com/img/b/R29vZ2xl/AVvXsEg1VaYqu0lQmdWp0Nqb9FQZdfOGKQcz1-hr9wIWirT53n-oCQiuYvvsvUIoPn-Bna2h6Ny2k-9KjfO2LobkPPeraNgSLrtyqP_CIsLShBUfixzZlFZl1VMJRh7_ONNeEnfYyQLW5ycbSw77/s1600/1659146763374622-0.png)
ಮಂಗಳೂರು: ಗುಡುಗು - ಮಿಂಚು ಸಹಿತ ಭಾರೀ ಮಳೆ; ಶಾಲೆಗಳಿಗೆ ರಜೆ
Saturday, July 30, 2022
ಮಂಗಳೂರು: ದ.ಕ.ಜಿಲ್ಲೆಯ ಹಲವೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು, ಮುಲ್ಕಿ, ಮೂಡುಬಿದಿರೆ, ಉಳ್ಳಾಲ ಮತ್ತು ಬಂಟ್ವಾಳ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಉಳ್ಳಾಲ, ಮುಲ್ಕಿ, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಶನಿವಾರ ಮಂಗಳೂರು ಉಪ ವಿಭಾಗದಾದ್ಯಂತ ರಜೆ ಘೋಷಿಸಲಾಗಿದೆ. ಆದ್ದರಿಂದ ಮಂಗಳೂರು, ಮುಲ್ಕಿ, ಮೂಡುಬಿದಿರೆ, ಉಳ್ಳಾಲ ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಪುತ್ತೂರು ಉಪವಿಭಾಗದ ಇತರ ಸ್ಥಳಗಳಲ್ಲಿ, ಸ್ಥಳೀಯ ಪರಿಸ್ಥಿತಿಯನ್ನು ನಿರ್ಣಯಿಸಿ ತಹಶೀಲ್ದಾರರು ಮತ್ತು ಬಿಇಒಗಳು ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.