-->
Kadaba :- ಕಡಬಕ್ಕೆ ಜಿಲ್ಲಾಧಿಕಾರಿಗಳ ಭೇಟಿ.ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ..!

Kadaba :- ಕಡಬಕ್ಕೆ ಜಿಲ್ಲಾಧಿಕಾರಿಗಳ ಭೇಟಿ.ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ..!

ಸರಕಾರದ ಆದೇಶದಂತೆ  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಕಛೇರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದು,ಕಡಬ ಸ್ಥಳೀಯಾಡಳಿತದ ಅಧಿಕಾರಿಗಳ ನಡೆ ಸಾರ್ವಜನಿಕರಿಗೆ ಬೇಸರ ತರಿಸಿದೆ.

ಜಿಲ್ಲಾಧಿಕಾರಿಗಳ ಭೇಟಿಯ ಬಗ್ಗೆ ಕಡಬದ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೂ ಈ ಸಮಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಒಂದೆಡೆ ಮಳೆ, ಇನ್ನೊಂದೆಡೆ  ಕಛೇರಿಯ ಎದುರು ಪುರುಷರು,ಮಹಿಳೆಯರು ಅರ್ಜಿ ಹಿಡಿದುಕೊಂಡು ನಿಂತು ಬಿಟ್ಟಿದ್ದರು. ಜಿಲ್ಲಾಧಿಕಾರಿ ತಹಸೀಲ್ದಾರ್ ಅವರ ಕಛೇರಿಯ ಒಳಗಡೆ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಿದ್ದರು.ಇಂತಹ ಉತ್ತಮ ಕಾರ್ಯಕ್ರಮ ಆದರೂ ಇದನ್ನು ಒಂದು ಸಭಾಭವನ ಅಥವಾ ವಿಶಾಲ ಕೊಠಡಿಯಲ್ಲಿ ಮಾಡಿದ್ದರೆ ಸಾರ್ವಜನಿಕ ರಿಗೆ ಅನುಕೂಲವಾಗುತ್ತಿತ್ತು. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತೊಳ್ಳಲಿ ಎಂದು ಸಾರ್ವಜನಿಕರ ಅಭಿಪ್ರಾಯ..

Ads on article

Advertise in articles 1

advertising articles 2

Advertise under the article