KPTCL Exam Dates: ಕೆಪಿಟಿಸಿಎಲ್'ನ 1492 AO, JE, ಕಿರಿಯ ಸಹಾಯಕರ ಪರೀಕ್ಷೆ ವೇಳಾಪಟ್ಟಿ ಪ್ರಕಟ
KPTCL Exam Dates: ಕೆಪಿಟಿಸಿಎಲ್'ನ 1492 AO, JE, ಕಿರಿಯ ಸಹಾಯಕರ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ನ AE, JE, ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧತ್ಮಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.
ಕೆಇಎ ಕೆಪಿಟಿಸಿಎಲ್ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟ.
ಜುಲೈ 27, 2022ರಿಂದ ಪರೀಕ್ಷೆ ಆರಂಭ.
ಅಡ್ಮಿಟ್ ಕಾರ್ಡ್ ಶೀಘ್ರದಲ್ಲಿ ಪ್ರಕಟ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ನ ವಿವಿಧ 1492 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ.
KPTCLನ ಸಹಾಯಕ ಇಂಜಿನಿಯರ್ ಇಲೆಕ್ಟ್ರಿಕಲ್ ಮತ್ತು ಸಿವಿಲ್, ಕಿರಿಯ ಇಂಜಿನಿಯರ್ ಇಲೆಕ್ಟ್ರಿಕಲ್ ಮತ್ತು ಸಿವಿಲ್ ವಿಭಾಗಗಳ ಹುದ್ದೆಗಳು, ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಆಹ್ವಾನಿಸಿತ್ತು.
ಇದೀಗ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಇಎ ವೆಬ್‌ಸೈಟ್‌ನಲ್ಲಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಅಪ್‌ಲೋಡ್ ಮಾಡಲಾಗಿದೆ.
ಜುಲೈ ತಿಂಗಳ 23, 24 ಹಾಗೂ ಆಗಸ್ಟ್ 07ರಂದು ಈ ಮೇಲಿನ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕನ್ನಡ ಭಾಷಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪರೀಕ್ಷೆ ವೇಳಾಪಟ್ಟಿ ಈ ಕೆಳಗಿನಂತಿದೆ.
ಸಹಾಯಕ ಎಂಜಿನಿಯರ್ (ವಿದ್ಯುತ್) ಸಿವಿಲ್ ಹುದ್ದೆ: ಪರೀಕ್ಷೆ ದಿನಾಂಕ : ಜುಲೈ 23, 2022 (ಅಪರಾಹ್ನ 2.30 ರಿಂದ 4.30 ರವರೆಗೆ)
ಗರಿಷ್ಟ 100 ಅಂಕಗಳು. ಪರೀಕ್ಷಾ ಕೇಂದ್ರ: ಬೆಂಗಳೂರು ಮಾತ್ರ
ಕಿರಿಯ ಎಂಜಿನಿಯರ್-ವಿದ್ಯುತ್ ಹುದ್ದೆ: ಪರೀಕ್ಷೆ ದಿನಾಂಕ : ಜುಲೈ 24 (ಪೂರ್ವಾಹ್ನ 10.30ರಿಂದ 12.30 ಗಂಟೆವರೆಗೆ)
ಕಿರಿಯ ಎಂಜಿನಿಯರ್ - ಸಿವಿಲ್ ಹುದ್ದೆ: ಪರೀಕ್ಷೆ ದಿನಾಂಕ : ಜುಲೈ 24, 2022 (ಅಪರಾಹ್ನ 2.30 ರಿಂದ 4.30 ರವರೆಗೆ)
ಪರೀಕ್ಷೆ 100 ಅಂಕಗಳಿಗೆ... ಪರೀಕ್ಷಾ ಕೇಂದ್ರ: ಬೆಂಗಳೂರು ಮಾತ್ರ
-; ಕಿರಿಯ ಸಹಾಯಕ ಹುದ್ದೆಗಳಿಗೆ ಪರೀಕ್ಷೆ ದಿನಾಂಕ: ಆಗಸ್ಟ್ 07, 2022 (ಪೂರ್ವಾಹ್ನ 10-30ರಿಂದ 12-30 ಗಂಟೆವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಕನ್ನಡ ಭಾಷಾ ಪರೀಕ್ಷೆಯ ದಿನಾಂಕ : ಆಗಸ್ಟ್ 07, 2022 (ಅಪರಾಹ್ನ 2-00 ರಿಂದ 05-00 ಗಂಟೆ ರವರೆಗೆ)
ಈ ಪರೀಕ್ಷೆಯನ್ನು 150 ಅಂಕಗಳಿಗೆ ನೀಡಲಾಗುತ್ತದೆ.
KPTCLನ ಈ ಕೆಳಗಿನ ಸಂಖ್ಯೆ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ.
ಸಹಾಯಕ ಎಂಜಿನಿಯರ್ ( ವಿದ್ಯುತ್ ): 505
ಸಹಾಯಕ ಎಂಜಿನಿಯರ್ ( ಸಿವಿಲ್) : 28
ಕಿರಿಯ ಎಂಜಿನಿಯರ್ (ವಿದ್ಯುತ್) : 570
ಕಿರಿಯ ಎಂಜಿನಿಯರ್ ( ಸಿವಿಲ್): 29
ಕಿರಿಯ ಸಹಾಯಕ : 360
ಒಟ್ಟು ಹುದ್ದೆಗಳ ಸಂಖ್ಯೆ : 1492
KPTCL ಹುದ್ದೆಗಳಿಗೆ ಅಧಿಸೂಚಿಸಿ, ಅರ್ಜಿ ಸ್ವೀಕರಿಸಿದ ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಪ್ರಾರಂಭಿಕ ದಿನಾಂಕ : 07-02-2022
ಅರ್ಜಿ ಸಲ್ಲಿಸಲು ನೀಡಿದ್ದ ಕೊನೆ ದಿನಾಂಕ : 07-03-2022
ಶುಲ್ಕ ಪಾವತಿಗೆ ನೀಡಿದ್ದ ಕೊನೆ ದಿನಾಂಕ : 09-03-2022
ಪರೀಕ್ಷೆಗೆ ಒಂದು ವಾರ ಮುಂಚಿತವಾಗಿಯೇ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆಯನ್ನು ನೀಡಿ ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.