Mangluru: ಪಾವಂಜೆ ನಂದಿನಿ ನದಿಗೆ ಹಾರಿದ ಪೋಸ್ಟ್ ಆಫೀಸ್ ಉದ್ಯೋಗಿ ನಾಪತ್ತೆ
Wednesday, July 13, 2022
ಮಂಗಳೂರು: ನಗರದ ಹೊರವಲಯದ ಪಾವಂಜೆಯಲ್ಲಿರುವ ನಂದಿನಿ ನದಿಗೆ ಹಾರಿ ಪೋಸ್ಟ್ ಆಫೀಸ್ ಉದ್ಯೋಗಿಯೋಗಿಯೋರ್ವರು ನಾಪತ್ತೆಯಾಗಿರುವ ಘಟನೆಯೊಂದು ನಿನ್ನೆ ರಾತ್ರಿ ನಡೆದಿದೆ.
ಮಂಡ್ಯ ಮೂಲದ ನಿವಾಸಿ ಪ್ರಸ್ತುತ ಮಂಗಳೂರಿನ ಪೋಸ್ಟ್ ಆಫೀಸ್ ನೌಕರನಾಗಿರುವ ರಾಕೇಶ್ ಗೌಡ ನದಿಗೆ ಹಾರಿ ನಾಪತ್ತೆಯಾದವರು.
ನಂದಿನಿ ನದಿಗೆ ಹಾರುವ ಮುನ್ನ ರಾಕೇಶ್ ಗೌಡ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್ ನಲ್ಲಿಯೇ ಇಟ್ಟಿದ್ದಾರೆ. ಅಲ್ಲದೆ ತಾನು ನದಿಗೆ ಹಾರುತ್ತಿದ್ದೇನೆಂದು ಸಂಬಂಧಿಕರಿಗೆ ವಾಟ್ಸ್ಆ್ಯಪ್ ನಲ್ಲಿ ತಿಳಿಸಿದ್ದಾರೆ. ಜೊತೆಗೆ ನದಿಗೆ ಹಾರುತ್ತಿರುವ ಪ್ರದೇಶದ ಲೊಕೇಷನ್ ಕೂಡಾ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಶೋಧ ಕಾರ್ಯ ನಡೆಸುತ್ತಿದ್ದಾರೆ.
ರಾಕೇಶ್ ಗೌಡ ಅವರ ಮಾವ ಅಬಕಾರಿ ಇಲಾಖೆಯ ಡಿವೈಎಸ್ಪಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಬಕಾರಿ ಡಿವೈಎಸ್ಪಿಯವರ ಸೂಚನೆಯಂತೆ ಅಬಕಾರಿ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ ಎನ್ನಲಾಗಿದೆ.