ಬೆಂಗಳೂರು: 'ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ': ಮನವಿ ಮಾಡಿದ ಮಾಜಿ ಶಾಸಕ
Wednesday, July 6, 2022
ಬೆಂಗಳೂರು: ಪುತ್ರನ ದುರ್ಬುದ್ಧಿಯಿಂದ ಬೇಸತ್ತು 'ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ' ಮಾಜಿ ಶಾಸಕರೊಬ್ಬರು ಮನವಿ ಸಾರ್ವಜನಿಕರಲ್ಲಿ ಮಾಡಿರುವ ವಿಚಾರವೊಂದು ತಿಳಿದು ಬಂದಿದೆ.
ಯಲ್ಲಾಪುರದ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಅವರು ಪುತ್ರನಿಗೆ ಸಾಲ ಕೊಡದಿರಿ ಎಂದು ಮನವಿಯೊಂದನ್ನು ಮಾಧ್ಯಮಕ್ಕೆ ನೀಡಿದ್ದಾರೆ.
ನನ್ನ ಪುತ್ರ ಬಾಪುಗೌಡ ಪಾಟೀಲನಿಗೆ ಯಾರೂ ಸಾಲ ಕೊಡಬೇಡಿ. ದುಶ್ಚಟಕ್ಕೆ ಬಲಿಯಾಗಿ ಕೋಟ್ಯಂತರ ರೂ. ಸಾಲ ಮಾಡಿ ಆತ ತನ್ನ ಎಲ್ಲಾ ಆಸ್ತಿಯನ್ನು ಮಾರಿದ್ದಾನೆ. ನನ್ನ ಹೆಸರು ಹೇಳಿ ಜನರಿಗೆ ಸುಳ್ಳು ಹೇಳಿ ಸಾಲ ಪಡೆಯುತ್ತಿದ್ದಾನೆ. ದಯವಿಟ್ಟು ಸಾರ್ವಜನಿಕರು ನನ್ನ ಪುತ್ರನ ಮಾತಿಗೆ ಮರುಳಾಗಿ ಸಾಲ ಕೊಡಬಾರದೆಂದು' ವಿ.ಎಸ್.ಪಾಟೀಲ್ ಅವರು ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.