ಬೆಂಗಳೂರು: ಸಲಿಂಗಕಾಮವನ್ನು ಬಯಸಿ ಚೆನ್ನೈನಿಂದ ಬಂದವ ಮೃತದೇಹವಾಗಿ ಪತ್ತೆ
Friday, July 15, 2022
ಬೆಂಗಳೂರು: ಸಲಿಂಗಕಾಮವನ್ನು ಬಯಸಿ ಚೆನ್ನೈನಿಂದ ಬೆಂಗಳೂರಿಗೆ ಬಂದವನು ಮಾರತಹಳ್ಳಿ ಲಾಡ್ಜ್ ನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ಸಂದರ್ಭ ಸಾವಿನ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ತಮಿಳುನಾಡು ಮೂಲದ ರಾಜಗೋಪಾಲ್ (24) ಮೃತಪಟ್ಟ ವ್ಯಕ್ತಿ. ಈತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪಿದಲ್ಲಿ ತಮಿಳು ವಣ್ಣನ್ ನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ನಡುವೆ ಸಲಿಂಗಕಾಮದ ಸಂಬಂಧ ಇತ್ತು ಎಂದು ತನಿಖೆಯಿಂದ ಬಯಲಾಗಿದೆ.
ಜುಲೈ 4ರಂದು ಮಾರತಹಳ್ಳಿ ರಿಲ್ಯಾಕ್ಸ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಲಾಗಿತ್ತು. ಆದರೆ ಎರಡು ದಿನವಾದರೂ ರೂಂ ರಿನಿವಲ್ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಕೋಣೆಯನ್ನು ಪರಿಶೀಲನೆ ನಡೆಸಿದಾಗ ರಾಜಗೋಪಾಲ್ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಕೊಲೆ ಕೃತ್ಯ ನಡೆಸಿ ತಮಿಳು ವಣ್ಣನ್ ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರೂ ಸಲಿಂಗಕಾಮದ ನಂಟು ಹೊಂದಿದ್ದರು. ಇವರು ತಮಿಳುನಾಡಿನ ಚೆನ್ನೈ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತಿದ್ದ ವೇಳೆ ಇವರಿಬ್ಬರ ನಡುವೆ ಸಲಿಂಗಕಾಮದ ಸಂಬಂಧವನ್ನು ಹೊಂದಿದ್ದರು. ಇಬ್ಬರೂ ಮದುವೆಯಾದ ಬಳಿಕವೂ ಸಲಿಂಗಕಾಮದ ಸಂಬಂಧ ಮುಂದುವರಿಸಿದ್ದರು. ಪರಿಣಾಮ ಇಬ್ಬರ ದಾಂಪತ್ಯ ಜೀವನವೂ ಮುರಿದು ಬಿದ್ದಿತ್ತು.
ಮದುವೆ ಮುರಿದ ಬಳಿಕ ತಮಿಳು ವಣ್ಣನ್ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ. ಸಲಿಂಗಕಾಮದ ಉದ್ದೇಶದಿಂದ ಚೆನ್ನೈನಿಂದ ಬಂದಿದ್ದ ರಾಜಗೋಪಾಲ್ ನೊಂದಿಗೆ ಮಾರತಹಳ್ಳಿಯ ಲಾಡ್ಜ್ ನಲ್ಲಿ ಜೊತೆಗಿದ್ದ. ಇದೀಗ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.