![Nelyadi :-ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು.. Nelyadi :-ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..](https://blogger.googleusercontent.com/img/b/R29vZ2xl/AVvXsEiwlOTioUrdxkKQyLCl82bwdBHEWsb1OpUm0It0zolvwAUu5f-5lZnsRpE-rQrqVGH50uPo5TlD-_b6gsM60B4iVd0WybpMRcpGMFCLHWd2fAMqxSF0-kb7PuzWLfDHYyCeReIO7-zd1dY/s1600/1658857493662902-0.png)
Nelyadi :-ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು..
Tuesday, July 26, 2022
ನೆಲ್ಯಾಡಿ
ಆಕಸ್ಮಿಕ ವಿದ್ಯುತ್ ಶಾಕ್‌ಗೆ ಒಳಗಾಗಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಅಡ್ಡಹೊಳೆ ನಿವಾಸಿ ಮೋನಚ್ಚನ್ ಎಂಬವರ ಪುತ್ರ ರೋಫಿನ್(15ವ.)ಮೃತಪಟ್ಟ ಯುವಕ. ಈತನು ಇಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ಜಾರ್ಜ್‌ಗೆ ಇಟ್ಟಿದ್ದು ನಂತರದಲ್ಲಿ ಮೊಬೈಲ್‌ಗೆ ತೆಗೆಯುತ್ತಿದ್ದಂತೆ ಸ್ವಿಚ್ ಬೋರ್ಡ್ ಹೊರಬಂದು ವಿದ್ಯುತ್ ವಯರ್ ಕೈಗೆ ತಾಗಿದೆ ಎನ್ನಲಾಗಿದೆ. ಈ ಸಮಯದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ರೋಫಿನ್ ಗಂಭೀರ ಸ್ಥಿತಿಗೆ ತಲುಪಿದ್ದ ಎಂದು ತಿಳಿದು ಬಂದಿದೆ. ತಕ್ಷಣವೇ ಮನೆಯವರು ಈತನನ್ನು ಆಸ್ಪತ್ರೆಗೆ ಕರೆದೊಯ್ಯಿದರಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಮತ್ತು ನೆಲ್ಯಾಡಿ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.