-->
ಬಂಧನದ ಬೆನ್ನಲ್ಲೇ ADGP ಅಮೃತ್ ಪಾಲ್, IAS ಮಂಜುನಾಥ್ ಸಸ್ಪೆಂಡ್: ರಾಜ್ಯ ಸರ್ಕಾರ ಆದೇಶ

ಬಂಧನದ ಬೆನ್ನಲ್ಲೇ ADGP ಅಮೃತ್ ಪಾಲ್, IAS ಮಂಜುನಾಥ್ ಸಸ್ಪೆಂಡ್: ರಾಜ್ಯ ಸರ್ಕಾರ ಆದೇಶ

ಬಂಧನದ ಬೆನ್ನಲ್ಲೇ ADGP ಅಮೃತ್ ಪಾಲ್, IAS ಮಂಜುನಾಥ್ ಸಸ್ಪೆಂಡ್: ರಾಜ್ಯ ಸರ್ಕಾರ ಆದೇಶ





ಭ್ರಷ್ಟಾಚಾರದ ವಿರಾಟ್ ರೂಪದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ADGP ಅಮೃತ್ ಪಾಲ್ ಮತ್ತು IAS ಅಧಿಕಾರಿ ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.



ಇಬ್ಬರು ಅಧಿಕಾರಿಗಳನ್ನೂ ಭ್ರಷ್ಟಾಚಾರದ ಆರೋಪದ ಮೇಲೆ ಬಂಧನ ಮಾಡಲಾಗಿತ್ತು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ. ಸಿಐಡಿ ತಂಡ ಎರಡು ಗಂಟೆಯಲ್ಲಿ ಈ ಬಂಧನ ಮಾಡಿದೆ. ಬ್ರೋಕರ್ ಹಾಗೂ ಹಣ ಕೊಟ್ಟವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.



PSI ಹಗರಣದಲ್ಲಿ ಅಮೃತ್ ಪೌಲ್?

PSI ನೇಮಕಾತಿ ಅಕ್ರಮದಲ್ಲಿ ರಾಜ್ಯ ಆಂತರಿಕಾ ಭದ್ರತಾ ವಿಭಾಗದ ADGP ಅಮೃತ್ ಪೌಲ್ ಅವರನ್ನು ಸಿಐಡಿ‌ ಪೊಲೀಸರು ಬಂಧಿಸಿದ್ದಾರೆ. ನ್ಯ್ಯಾಯಾಲಯಕ್ಕೆ ಹಾಜರುಪಡಿಸಿದ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಅದೇಶ ಹೊರಬೀಳುತ್ತಿದ್ದಂತೆಯೆ ಅಮೃತ್ ಪೌಲ್ ಕೋರ್ಟ್ ಹಾಲ್‌ನಲ್ಲೇ ಕಣ್ಣೀರು ಹಾಕಿದ್ಧಾರೆ.


ಇದೇ ವೇಳೆ, ಹಗರಣದಲ್ಲಿ ಭಾಗಿಯಾಗಿರುವ ಹಲವರ ಎದೆಯಲ್ಲಿ ಕಂಪನ ಶುರುವಾಗಿದೆ.


ಕೋರ್ಟ್​ಗೆ ಹಾಜರಾಗಿದ್ದ ಎಡಿಜಿಪಿ ಅಮೃತ್ ಪೌಲ್

DySP ಶೇಖರ್ ಅಂಡ್ ಟೀಂ ನೇತೃತ್ವದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಕೋರ್ಟ್​ಗೆ ಕರೆತರಲಾಗಿದೆ. CID ತಂಡ ADGP ಅಮರತ್ ಪಾಲ್ ಜೊತೆ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಕೋರ್ಟ್ ಗೆ ಹಾಜರು ಪಡಿಸಿದೆ. ಪ್ರಸ್ತುತ ಜೈಲಿನಲ್ಲಿರುವ ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆದಿತ್ತು.


ಲಂಚ ಪಡೆದ ಪ್ರಕರಣದಲ್ಲಿ ಡಿಸಿ ಮಂಜುನಾಥ್ ಅರೆಸ್ಟ್

ಐದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ನಗರದ ಆಗಿನ ಜಿಲ್ಲಾಧಿಕಾರಿ ಮಂಜುನಾಥ್​ರನ್ನು ಕೂಡ ಬಂಧಿಸಲಾಗಿದೆ. ಹೈಕೋರ್ಟ್ ಭ್ರಷ್ಟಾಚಾರದ ಬಗ್ಗೆ ಖಡಕ್ ಆಗಿ ಮಾತನಾಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ.

IAS ಅಧಿಕಾರಿ ಮಂಜುನಾಥ್ ಅವರನ್ನು ಅವರ ಯಶವಂತಪುರದ ಅಪಾರ್ಟ್‌ಮೆಂಟಿನಲ್ಲಿ ಬಂಧಿಸಲಾಗಿದೆ.


Also Read

ಅಮೃತ್ ಪಾಲ್‌ ಬಂಧನದ ಬೆನ್ನಲ್ಲೇ ಹಲವರ ಎದೆಯಲ್ಲಿ ಢವ ಢವ


Ads on article

Advertise in articles 1

advertising articles 2

Advertise under the article