![ಬೆಂಗಳೂರು: ಅತ್ಯಾಚಾರವೆಸಗಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ! ಬೆಂಗಳೂರು: ಅತ್ಯಾಚಾರವೆಸಗಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ!](https://blogger.googleusercontent.com/img/b/R29vZ2xl/AVvXsEi8dTZMY3lMmoSqv7FKXVrdcouWY9YoXwNmQR3CYm8pwe4YyLYCXP4eC18gkSKPLDutaLhF-WkigSdiEU5G5HT_6XYam1co9TZJQavSQ5FzwkTz_lbIkhyphenhyphenxJK_KJDk8Zf3RvDkl_jqAvt3X/s1600/1656857849684192-0.png)
ಬೆಂಗಳೂರು: ಅತ್ಯಾಚಾರವೆಸಗಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ!
Sunday, July 3, 2022
ಬೆಂಗಳೂರು: ಅತ್ಯಾಚಾರವೆಸಗಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹವೊಂದು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.
ಇದು ಸುಮಾರು 25 - 30 ವರ್ಷದ ಮಹಿಳೆಯ ಮೃತದೇಹವೆಂದು ಅಂದಾಜಿಸಲಾಗಿದೆ. ಮಹಿಳೆಯ ಮೃತದೇಹವು ಗುರುತು ದೊರದಿರುವಂತಹ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಹಿಳೆ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.