-->
'Sony' ಜೊತೆ 'Zee' ವಿಲೀನ: ಶೇರು ಮಾರುಕಟ್ಟೆಯಲ್ಲಿ ಪ್ರಕ್ರಿಯೆ ಅರಂಭ...

'Sony' ಜೊತೆ 'Zee' ವಿಲೀನ: ಶೇರು ಮಾರುಕಟ್ಟೆಯಲ್ಲಿ ಪ್ರಕ್ರಿಯೆ ಅರಂಭ...

'Sony' ಜೊತೆ 'Zee' ವಿಲೀನ: ಶೇರು ಮಾರುಕಟ್ಟೆಯಲ್ಲಿ ಪ್ರಕ್ರಿಯೆ ಅರಂಭ...





ದೇಶದ ಅತಿದೊಡ್ಡ ಮನರಂಜನಾ ಕೇಬಲ್ ಜಾಲ ಹೊಂದಿರುವ ಟಿವಿ ಮಾಧ್ಯಮ Zee ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿ. ಸಂಸ್ಥೆಯನ್ನು Sony ಇಂಡಿಯಾ ಕಾರ್ಪ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.



TV, OTT ಮಾಧ್ಯಮಗಳಬೃಹತ್ ವಿಲೀನಕ್ಕೆ ಮುಂಬೈ ಮತ್ತು ನೇಷನಲ್ ಶೇರು ಮಾರುಕಟ್ಟೆ ಹಸಿರು ನಿಶಾನೆ ತೋರಿದ್ದು, ವಿಲೀನ ಪ್ರಕ್ರಿಯೆ ಚುರುಕುಗೊಂಡಿದೆ. ಇದರೊಂದಿಗೆ, ಕುಲ್ವರ್ ಮ್ಯಾಕ್ಸ್ ಎಂಟರ್‌ಟೇನ್‌ಮೆಂಟ್ ಪ್ರೈ ಲಿಮಿಟೆಡ್ (ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಪ್ರೈ ಲಿಮಿಟೆಡ್)ನ ಜೊತೆಗೆ ಝೀ ಎಂಟರ್‌ಟೇನ್‌ಮೆಂಟ್ ವಿಲೀನಗೊಳ್ಳಲಿದೆ.


ಈಗಾಗಲೇ ಮಾಡಲಾದ ಒಪ್ಪಂದದ ಪ್ರಕಾರ, Zee ಸಂಸ್ಥೆಯ ಹೂಡಿಕೆಗಳು ಶೇಕಡಾ 47.07ಕ್ಕೆ ಉಳಿದಿದೆ ಉಳಿದ ಷೇರುಗಳು ಸೋನಿ ಇಂಡಿಯಾ ನೆಟ್‌ವರ್ಕ್‌ ಹೂಡಿಕೆದಾರರ ಒಡೆತನಕ್ಕೆ ಸೇರಿದೆ. Sony ಸುಮಾರು 1.57 ದಶಲಕ್ಷ ಡಾಲರ್ ಅಥವಾ 11,571 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ ಶೇ, 52.93ರಷ್ಟು ಶೇರು ಪಾಲನ್ನು ಪಡೆಯಲಿದೆ.



ನೂತನ ಒಪ್ಪಂದ ಪ್ರಕಾರ, ಜೀ ಸಂಸ್ಥೆಯಲ್ಲಿ ಸೋನಿ ಇಂಡಿಯಾ ಶೇ 53ರಷ್ಟು ಪಾಲು ಹೊಂದಲಿದೆ. ಉಳಿದದ್ದು ಜೀ ಪಾಲಾಗಲಿದೆ. Sony ಇಂಡಿಯಾ ಸರಿ ಸುಮಾರು 1.58 ದಶಲಕ್ಷ ಡಾಲರ್ ಬಂಡವಾಳ ಹೂಡಲಿದೆ.



ಸೋನಿ ಇಂಡಿಯಾಕ್ಕೂ ಮುನ್ನ, ಇತರೆ ಸಂಸ್ಥೆಗಳು ಕೂಡಾ ಝೀ ಸಂಸ್ಥೆಯಲ್ಲಿ ಬಂಡವಾಳ ಹೂಡಿದ್ದವು. ಇವೆಸ್ಕೋ ಡೆವಲಪ್ಮೆಂಟ್ ಮಾರ್ಕೆಟ್ಸ್ ಫಂಡ್ ಹಾಗೂ OFI ಗ್ಲೋಬಲ್ ಚೀನಾ ಫಂಡ್ LLC ನಿಯಮ ಪ್ರಕಾರ ಬಂಡವಾಳ ಹೂಡಿದ್ದು, ಶೇ 17.9ರಷ್ಟು ಪಾಲು ಹೊಂದಿವೆ.



1992ರಲ್ಲಿ ಝೀ ಸಂಸ್ಥೆ ಆರಂಭಿಸಿದ ಸುಭಾಷ್ ಚಂದ್ರ ಮತ್ತು ಕುಟುಂಬ ಸಂಸ್ಥೆ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದೆ. ಪುನೀತ್ ನಿರ್ಗಮನದಿಂದ ಅಂತರ ಇನ್ನಷ್ಟು ಹೆಚ್ಚಲಿದೆ. ಈಗ ಇಬ್ಬರು ಡೈರೆಕ್ಟರ್‌ಗಳು ಈ ಸಂಸ್ಥೆ ತೊರೆದಿದ್ದಾರೆ.



ವಿಲೀನ ಬಳಿಕ, ಸಂಸ್ಥೆಯು ದೇಶದ ಅತಿ ದೊಡ್ಡ ಹಾಗೂ ವಿಶಾಲ ಮನರಂಜನಾ ಜಾಲ ರೂಪಿಸಲಿದ್ದು, ಶೇ. 26ರಷ್ಟು ನೋಡುಗರನ್ನು ಹಂಚಿಕೆ ಹೊಂದಿದೆ. Zee ಜತೆ ಶೇ. 18ರಷ್ಟು ವೀಕ್ಷಕರ ಪಾಲು ಮತ್ತು ಸೋನಿ ಶೇಕಡಾ 8ರಷ್ಟು ವೀಕ್ಷಕರ ಪಾಲು ಹೊಂದಿದೆ. ಈ 2 ದಿಗ್ಗಜ ಕಂಪೆನಿಗಳ ಕೂಡುವಿಕೆಯಿಂದ ಬರೋಬ್ಬರಿ 75 ಚಾನೆಲ್‌ಗಳ ನೆಟ್‌ವರ್ಕ್ ಸೃಷ್ಟಿಯಾಗಲಿದೆ.




ಸೋನಿ ಪ್ರಸ್ತುತ ಸರಿ ಸುಮಾರು 26 ಚಾನೆಲ್‌ಗಳೊಂದಿಗೆ ವ್ಯವಹಾರ ನಡೆಸುತ್ತಿದೆ. ಕ್ರೀಡಾ ಪ್ರಕಾರದಲ್ಲಿ 2 ಹೊಸ ಚಾನೆಲ್‌ಗಳು ಸೇರಿದೆ. Zee ಎಂಟರ್‌ಟೈನ್‌ಮೆಂಟ್ 49 ಚಾನೆಲ್‌ಗಳನ್ನು ಸೇರಿಸುತ್ತದೆ. Zee 173 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ 1.3 ಶತಕೋಟಿಗೂ ಹೆಚ್ಚು ಜನರನ್ನು ತಲುಪಿದೆ.



ಈಗ ದೇಶದ 60 ಕೋಟಿ ಜನರನ್ನು ಜೀ ರೀಚ್ ಆಗುತ್ತಿದೆ. ಆದರೆ Sony ದೇಶದ 70 ಕೋಟಿ ಜನರನ್ನು ತಲುಪುತ್ತಿದೆ. ಮತ್ತು ಅದರ ರೀಚ್‌ 167 ದೇಶಗಳಿಗೆ ಚಾಚಿದೆ.

ಎರಡೂ ನೆಟ್‌ವರ್ಕ್‌ಗಳು ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿವೆ.



ಝೀ 5 ಮತ್ತು ಸೋನಿLIV ಎರಡೂ ಸಂಸ್ಥೆಗಳು ತನ್ನದೇ ಆದ ಸ್ಟ್ರೀಮಿಂಗ್ ಹೊಂದಿದೆ. ಹಾಗಾಗಿ, ಇವು ತಮ್ಮ ಪ್ರತ್ಯೇಕ ಚಾನೆಲ್‌ಗಳ ಒಟ್ಟಿಗೆ OTT ಮೂಲಕ ಇನ್ನಷ್ಟು ಜನರನ್ನು ಬೆಸೆಯಲಿದೆ.

Ads on article

Advertise in articles 1

advertising articles 2

Advertise under the article