ವಾಡಿ: ಸ್ಕೂಟಿಯನ್ನು ಸೇತುವೆ ಮೇಲೆ ನಿಲ್ಲಿಸಿ ಏಕಾಏಕಿ ನದಿಗೆ ಹಾರಿದ ವಿದ್ಯಾರ್ಥಿನಿ!
Wednesday, July 20, 2022
ವಾಡಿ: ಕಾಲೇಜು ವಿದ್ಯಾರ್ಥಿನಿ ಶಹಾಬಾದ ಸಮೀಪದ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ರಾಜೇಶ್ವರಿ (21) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಸ್ಕೂಟಿಯಲ್ಲಿ ಆಗಮಿಸಿರುವ ಈಕೆ ಸೇತುವೆ ಮೇಲೆ ಅವಸರದಲ್ಲಿ ಸ್ಕೂಟಿಯನ್ನು ನಿಲ್ಲಿಸಿ ಏಕಾಏಕಿ ನದಿಗೆ ಜಿಗಿದಿದ್ದಾಳೆ. ಪರಿಸರದಲ್ಲಿದ್ದವರು ನೋಡನೋಡುತ್ತಿದ್ದಂತೆ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿದ್ದಳೆಂದು ಪ್ರತ್ಯಕದರ್ಶಿಗಳು ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಶಹಾಬಾದ ನಗರ ಠಾಣೆಯ ಪೋಲೀಸರು, ಸ್ಕೂಟಿ ನಂಬರ್ ಸಹಾಯದಿಂದ ನದಿಗೆ ಹಾರಿರುವುದು ರಾಜೇಶ್ವರಿ ಹೊಸಳ್ಳಿ ಎಂಬುದು ಖಚಿತಪಡಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕಾರದಿಂದ ನದಿಯಲ್ಲಿ ಮುಳುಗಿ ನಾಪತ್ತೆಯಾಗಿರುವ ವಿದ್ಯಾರ್ಥಿನಿಯ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.