ಬಜ್ಪೆ: ತಲಕಲ ಧರ್ಮಚಾವಡಿ ಮಠದ ಶ್ರೀಕೃಷ್ಣ ದೇವಿಪ್ರಸಾದ್ ಸ್ವಾಮೀಜಿ ಆತ್ಮಹತ್ಯೆ!
Friday, July 22, 2022
ಮಂಗಳೂರು: ನಗರದ ಹೊರವಲಯದಲ್ಲಿರುವ ಬಜ್ಪೆ ಸಮೀಪದ ತಲಕಲ ಕೊಳಂಬೆಯ ಧರ್ಮಚಾವಡಿ ಮಠದ ಶ್ರೀ ಕೃಷ್ಣ ದೇವಿಪ್ರಸಾದ್ ಸ್ವಾಮೀಜಿಯವರ(50) ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶ್ರೀ ಕೃಷ್ಣ ದೇವಿಪ್ರಸಾದ್ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ದೇವಿಪ್ರಸಾದ್ ಶೆಟ್ಟಿ. ಇವರಿಗೆ ಪತ್ನಿಯಿದ್ದು, ಓರ್ವ ಪುತ್ರಿಯೂ ಇದ್ದಾಳೆ. ಇವರು ಐದು ವರ್ಷಗಳ ಐದು ವರ್ಷಗಳ ಹಿಂದೆ ಜೀವನದಲ್ಲಿ ವೈರಾಗ್ಯ ತಳೆದು ಸಂನ್ಯಾಸ ದೀಕ್ಷೆ ಪಡೆದುಕೊಂಡು ಪತ್ನಿಯಿಂದ ದೂರವಿದ್ದರು. ಆ ಬಳಿಕ ಅವರು ಕೊಳಂಬೆಯ ತಲಕಲ ಶೆಟ್ಟಿಪಾಲ್ ಎಂಬಲ್ಲಿ ತಮ್ಮ ಮನೆಯ ಬಳಿಯೇ ಧರ್ಮಚಾವಡಿ ಎಂಬ ಮಠವನ್ನು ಕಟ್ಟಿಕೊಂಡಿದ್ದರು.
ಶುಕ್ರವಾರ ಬೆಳಗ್ಗೆ 4ಗಂಟೆಯ ಸುಮಾರಿಗೆ ಶ್ರೀಕೃಷ್ಣ ದೇವಿಪ್ರಸಾದ ಸ್ವಾಮೀಜಿಯವರು ತಮ್ಮ ಕಾವಿಯ ಲುಂಗಿಯಿಂದಲೇ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಶ್ರೀಗಳ ಪೂರ್ವಾಶ್ರಮದ ಪತ್ನಿ ಪ್ರಭಾ ಶೆಟ್ಟಿಯವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮಾಡುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.