Sullya :- ಅರಣ್ಯಧಿಕಾರಿಗಳ ದಾಳಿ..4.5 ಲಕ್ಷ ಮೌಲ್ಯದ ಸೊತ್ತುಗಳು ವಶ. ಮೂವರ ಬಂಧನ.
Sunday, July 31, 2022
ಸುಳ್ಯ
ಸುಳ್ಯದ ಅಜ್ಜಾವರ ಗ್ರಾಮ ವ್ಯಾಪ್ತಿಯ ಮುಳ್ಯಕಜೆ ಎಂಬಲ್ಲಿ ಅಕ್ರಮವಾಗಿ ಹಲಸು ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ರಾತ್ರಿ ಗಸ್ತು ಸಂಚರಿಸುತ್ತಿದ್ದ ಸುಳ್ಯ ವಲಯದ ಅರಣ್ಯಾದಿಕಾರಿಗಳು ಪತ್ತೆಹಚ್ಚಿ ವಾಹನ ಸಹಿತ ಮರದ ಸೊತ್ತುಗಳನ್ನು ಹಾಗೂ ಮರ ಸಾಗಿಸುತ್ತಿದ್ದ ಮೂವರ ಸಹಿತ ಒಟ್ಟು 5 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗೆ ಸಂಭಂಧಿಸಿದಂತೆ, ಪ್ರಮುಖ ಆರೋಪಿಯಾದ ಅಡ್ಕಾರು ನಿವಾಸಿ ಮೊಹಮ್ಮದ್ ಮಜೀದ್ ನಡುವಡ್ಕ ಮನೆ ಹಾಗೂ ಮತ್ತೊರ್ವ ಆರೋಪಿಯು ತಲೆ ಮರೆಸಿಕೊಂಡಿದ್ದು, ವಾಹನ ಚಾಲಕರಾದ ಮೊಹಮ್ಮದ್ ಶಪೀಕ್, ಇಬ್ರಾಹಿಂ ಭಾತೀಷ ಹಾಗೂ ಸುಂದರ ಎಂಬುವವರನ್ನು ಬಂಧಿಸಲಾಗಿತ್ತು. ನಂತರದಲ್ಲಿ ಇವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದ್ದು. ಪ್ರಕರಣದಲ್ಲಿ ವಾಹನದ ಮೌಲ್ಯ ಸೇರಿ ಅಂದಾಜು 4.5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಪ್ರವೀಣ್ ಶೆಟ್ಟಿಯವರ ಮಾರ್ಗದರ್ಶನದಂತೆ ವಲಯ ಅರಣ್ಯಾದಿಕಾರಿಯಾದ ಗಿರೀಶ್ ರವರು ತನಿಖೆಯನ್ನು ಕೈಗೊಂಡಿದ್ದು ಕಾರ್ಯಚರಣೆಯಲ್ಲಿ ರಾತ್ತಿ ಗಸ್ತು ತಂಡದ ಉಪವಲಯ ಅರಣ್ಯಾದಿಕಾರಿಯಾದ ಯಶೊದರ್ ಅರಣ್ಯ ರಕ್ಷಕರಾದ ದೇವಿ ಪ್ರಸಾದ್ ದೀವೀಶ್ ನಿಂಗಪ್ಪ ಕೊಪ್ಪ ಹಾಗೂ ಅರಣ್ಯ ವೀಕ್ಷಕರಾದ ಗಂಗಾದರ ಮತ್ತು ಇಲಾಖಾ ವಾಹನ ಚಾಲಕರು ಪಾಲ್ಗೊಂಡಿದ್ದರು.