ಹೂತಿಟ್ಟ ಮೃತದೇಹದ ಬಾಯಿಗೆ ನೀರುಣಿಸಿದ ಗ್ರಾಮಸ್ಥರು: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!
Sunday, July 10, 2022
ವಿಜಯಪುರ: ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಎಲ್ಲೆಲ್ಲೂ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ವಿಜಯಪುರದ ಜನತೆ ಮಾತ್ರ ಮಳೆ ಬರಲಿ ಎಂದು ವಿಶಿಷ್ಟ ಆಚರಣೆಯೊಂದನ್ನು ಮಾಡುತ್ತಿದ್ದಾರೆ.
ಹೌದು.. ವಿಜಯಪುರದ ಜನತೆ ಮಳೆಗಾಗಿ ಯಾರೂ ಎಂದೂ ಎಲ್ಲೂ ಕಂಡು ಕೇಳರಿಯದ ಆಚರಣೆಯೊಂದನ್ನು ಮಾಡಿದ್ದಾರೆ. ವಿಜಯಪುರದ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಜನತೆ ಗೋರಿಯೊಳಗಿದ್ದ ಮೃತದೇಹದ ಬಾಯಿಗೆ ಪೈಪ್ ಮೂಲಕ ನೀರುಣಿಸಿ ಮಳೆ ಬರಲೆಂದು ಪ್ರಾರ್ಥಿಸಿದ್ದಾರೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಈ ಭಾಗದ ಜನತೆಯಲ್ಲಿದೆ.
ಹಾಗಾಗಿಯೇ ಟ್ಯಾಂಕರ್ ನಲ್ಲಿ ನೀರು ತಂದು ಗೋರಿಯೊಳಗಿದ್ದ ಮೃತದ ಬಾರಿಗೆ ನೀರುಣಿಸಿದ್ದಾರೆ. ಒಟ್ಟಿನಲ್ಲಿ ಈ ಆಚರಣೆಯಿಂದಾದರೂ ಇಲ್ಲಿಗೆ ಮಳೆ ಬರಲಪ್ಪ ಎನ್ನುವುದೇ ಆಶಯ.