
ಮಂಗಳೂರು ಸಮುದ್ರದಲ್ಲಿ ನಡೆಯಿತು ಮತ್ತೊಂದು ದುರಂತ: 11 ಮೀನುಗಾರರಿದ್ದ ಬೋಟ್ ಮುಳುಗಡೆ
Sunday, August 7, 2022
ಮಂಗಳೂರು: ಮೀನುಗಾರಿಕೆಗೆಂದು ತೆರಳಿರುವ ಬೋಟ್ ಪಣಂಬೂರಿನಿಂದ ಸುಮಾರು 90 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಮುಳುಗಡೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಕೃಷ್ಣ ಕುಮಾರ್ ಎಂಬವರ ಮಾಲಕತ್ವದ ಈ ಬೋಟ್ ಮೀನುಗಾರಿಕೆಗೆಂದು ತೆರಳಿತ್ತು. 11 ಮಂದಿ ಮೀನುಗಾರರು ಈ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆದರೆ ಪಣಂಬೂರಿನಿಂದ ಸುಮಾರು 90 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಈ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಈ ಬೋಟ್ ನಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಇನ್ನೊಂದು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.