139 ಕೆಜಿ ದೇಹ ತೂಕವನ್ನು 70 ಕೆಜಿಗೆ ಇಳಿಸಿದ ಯುವಕ: ತೂಕ ಇಳಿಕೆಗೆ ಪ್ರೇಯಸಿಯ ಆ ಒಂದು ಮಾತು ಕಾರಣ?
Tuesday, August 23, 2022
ನವದೆಹಲಿ: ಇತ್ತೀಚೆಗೆ ಯುವಕನೋರ್ವನು ತನ್ನ ದೇಹದ ತೂಕವನ್ನು ಇಳಿಸಿಕೊಂಡು ಫಿಟ್ ಆಗಿ ಎಲ್ಲರೂ ತಲೆದೂಗುವಂತೆ ಮಾಡಿದ್ದಾನೆ. ಆದರೆ ಅದರ ಹಿಂದಿನ ಕತೆ ಕೇಳಿದಾಗ ಒಂದು ಸಲ ಅಯ್ಯೋ ಎನಿಸಿದರೂ ಆತನ ಶ್ರದ್ಧೆ ಹಾಗೂ ಹಠ ನೋಡಿ ಮೆಚ್ಚಲೇಬೇಕು ಅನಿಸುತ್ತದೆ.
ಹೌದು... ತನ್ನ ದೇಹದ ತೂಕವನ್ನು ಕರಗಿಸಿ, ಫಿಟ್ ಆಗಿರುವ ವೀಡಿಯೋವನ್ನು ಯುವಕ ಹಂಚಿಕೊಂಡಿದ್ದಾನೆ. ಆ ವೀಡಿಯೋ ಸಖತ್ ವೈರಲ್ ಆಗಿದೆ. ಆತನ ಪ್ರೇಯಸಿಯ ಆ ಒಂದು ಮಾತಿಗೆ ಮನನೊಂದ ಆತ ತೂಕ ಇಳಿಸುವ ನಿರ್ಧಾರಕ್ಕೆ ಬಂದಿದ್ದಾನಂತೆ. ಈತನ ಹೆಸರು ಪುವಿ ಎಂದು ತಿಳಿದುಬಂದಿದೆ. ಈ ಮೊದಲು ಆತ ಬರೋಬ್ಬರಿ 139 ಕೆಜಿ ತೂಕವಿದ್ದನಂತೆ. ಆದರೆ ಇದೀಗ ದೇಹದ ತೂಕವನ್ನು ಕರಗಿಸಿ 70 ಕೆಜಿ ತೂಕ ಇಳಿಕೆ ಮಾಡಿ 69 ಕೆಜಿ ತೂಕ ಕಡಿಮೆಯಾಗಿದ್ದಾನೆ.
ತನ್ನ ತೂಕ ಇಳಿಸುವ ಪಯಣದ ವಿಡಿಯೋವನ್ನು ಪುವಿ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪುವಿ ಬಹಳ ದಪ್ಪಗಿದ್ದ ಕಾರಣ ಆತನ ಫೇಸ್ಟುಕ್ ಸ್ನೇಹಿತೆ ಆತನನ್ನು ಬಿಟ್ಟು ಹೋಗಿದ್ದಳ. "ನೀನು ಬಹಳ ದಪ್ಪಗಿದ್ದೀಯಾ ನಾನು ನಿನ್ನನ್ನು ಪ್ರೀತಿಸಲಾರೆ" ಎಂದು ಪ್ರೇಯಸಿ ಕೈಕೊಟ್ಟು ಹೋಗಿದ್ದಕ್ಕೆ ಪುವಿಯ ಮನಸ್ಸು ಚೂರಾಗಿತ್ತು. ಇದರಿಂದಲೇ ಕೊರಗಿದ್ದ ಪುವಿ ಕೊನೆಗೆ ತೂಕ ಇಳಿಸುವ ನಿರ್ಧಾರಕ್ಕೆ ಬಂದು ಜಿಮ್‌ಗೆ ಸೇರಿದ್ದಾನೆ. ನಿಯಮಿತವಾಗಿ ಜಿಮ್ ಮಾಡುತ್ತಾ ತನ್ನ ದೇಹಕ್ಕೆ ಒಂದು ಒಳ್ಳೆಯ ಆಕಾರ ನೀಡಿದ್ದಾರೆ. ಈ ಮೊದಲ XXXL ಸೈಜ್ ಬಟ್ಟೆ ತೊಡುತ್ತಿದ್ದ ಪುವಿ ಇದೀಗ L ಸೈಜ್‌ಗೆ ಇಳಿದಿದ್ದಾರೆ. ಪುವಿ ದೇಹದಲ್ಲಿದ್ದ ಬೊಜ್ಜಿನ ಪ್ರಮಾಣ ಗಣನೀಯವಾಗಿ ಕುಗ್ಗಿದೆ. ಪುವಿ ಕಟ್ಟುಮಸ್ತಾದ ದೇಹ ಹೊಂದಿದ್ದು , ಗುರುತೇ ಹಿಡಿಯದಷ್ಟು ಬದಲಾಗಿದ್ದಾರೆ. ಪುವಿಯ ಈ ಬದಲಾವಣೆ ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರಂತೆ.
ಪುವಿ ಜಿಮ್‌ನಲ್ಲಿ ವರ್ಕೌಟ್ ಮಾಡುವುದರೊಂದಿಗೆ ತನ್ನ ಆಹಾರ ಪೋಷಣೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಏಕೆಂದರೆ, ವ್ಯಾಯಾಮಕ್ಕಿಂತ ಆಹಾರಕ್ರಮಕ್ಕೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಪುವಿ ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಲು ಪ್ರಾರಂಭಿಸಿದರು. ಅವರ ಆಹಾರದಲ್ಲಿ ಬ್ರೆಡ್ , ಚಿಕನ್ , ಮೊಟ್ಟೆ , ಕಾರ್ಬೋಹೈಡ್ರೆಟ್ಗಳು ಮತ್ತು ಸೊಪ್ಪನ್ನು ಸೇವಿಸುತ್ತಿದ್ದರು. ಇದೀಗ ಒಳ್ಳೆಯ ದೇಹವನ್ನು ಹೊಂದಿದ್ದು , ಎಲ್ಲರಂತೆ ಲವಲವಿಕೆಯಿಂದಿದ್ದಾರೆ . ಅಲ್ಲದೆ , ಬಿಟ್ಟು ಹೋದ ಪ್ರೇಯಸಿ ಹೊಟ್ಟೆ ಉರಿದುಕೊಳ್ಳುವಷ್ಟು ಪುವಿ ಬದಲಾಗಿದ್ದಾರೆ.