-->
ಅಚ್ಯುತಪುರಂನ ಸೀಡ್ಸ್ ಗಾರ್ಮೆಂಟ್ ನಲ್ಲಿ ಮತ್ತೆ ಅನಿಲ ಸೋರಿಕೆ: 150 ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರ ಸ್ಥಿತಿ ಚಿಂತಾಜನಕ

ಅಚ್ಯುತಪುರಂನ ಸೀಡ್ಸ್ ಗಾರ್ಮೆಂಟ್ ನಲ್ಲಿ ಮತ್ತೆ ಅನಿಲ ಸೋರಿಕೆ: 150 ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರ ಸ್ಥಿತಿ ಚಿಂತಾಜನಕ

ಅಮರಾವತಿ (ಆಂಧ್ರಪ್ರದೇಶ): ಕಳೆದ ಮೇಯಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನ ಸೀಡ್ಸ್ ಗಾರ್ಮೆಂಟ್ ಕಾರ್ಖಾನೆಯಲ್ಲಿ ಮತ್ತೆ ರಾಸಾಯನಿಕ ಅನಿಲ ಸೋರಿಕೆಯಾಗಿ 150ರಷ್ಟು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. 

ರಾಸಾಯನಿಕ ಅನಿಲ ಸೋರಿಕೆಯಿಂದ ಒಂದು ವಾರಗಳ ಕಾಲ ಮುಚ್ಚಿದ್ದ ಈ ಕಾರ್ಖಾನೆ ಮತ್ತೆ ತೆರೆಯಲಾಗಿತ್ತು. ಆದರೆ ಕೇವಲ ಎರಡು ತಿಂಗಳಿನಲ್ಲಿಯೇ ಮತ್ತೊಮ್ಮೆ ಅನಿಲ ಸೋರಿಕೆಯಾಗಿ ದುರಂತ ಸಂಭವಿಸಿದೆ. ಈ ಬಾರಿ ನಡೆದ ದುರಂತದಲ್ಲಿ 150ಕ್ಕೂ ಅಧಿಕ ಮಂದಿ ಮಹಿಳಾ ಉದ್ಯೋಗಿಗಳು ಅಸ್ವಸ್ಥಗೊಂಡಿದ್ದಾರೆ. 

ಈ ಕಾರ್ಖಾನೆಯಲ್ಲಿ ಸುಮಾರು 4 ಸಾವಿರ ಕಾರ್ಮಿಕರು ಬಿ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅಧಿಕ ಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಈ ವಿಷಾನಿಲ ಸೇವನೆಯಿಂದ ಉದ್ಯೋಗಿಗಳು ಸ್ಥಳದಲ್ಲೇ ವಾಂತಿ ಮಾಡಿಕೊಂಡು ಮೂರ್ಛೆ ಹೋಗಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಮಹಿಳಾ ಕಾರ್ಮಿಕರಿಗೆ ಕಾರ್ಖಾನೆಯ ಆವರಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಉಳಿದವರನ್ನು ಅಚ್ಯುತಪುರಂ ಮತ್ತು ಅನಕಾಪಲ್ಲಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಾರ್ಖಾನೆಯ ಬಸ್‌ಗಳು, ಕಾರುಗಳು ಮತ್ತು ಅಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಗಿದೆ.

ಮೇಯಲ್ಲಿ ದುರಂತ ನಡೆದ ವೇಳೆ ಅಧಿಕಾರಿಗಳು ತನಿಖೆ ನಡೆಸಿ ಸುಮಾರು ಒಂದು ವಾರ ಕಾರ್ಖಾನೆ ಮುಚ್ಚಿಸಿದ್ದರು. ಕಾರ್ಖಾನೆಯಲ್ಲಿ ರಾಸಾಯನಿಕ ಅನಿಲ ಸೋರಿಕೆ ಕುರಿತು ಹೈದರಾಬಾದ್‌ನ ಐಐಸಿಟಿ ಸೇರಿದಂತೆ ಇತರ ಸಂಸ್ಥೆಗಳು ತನಿಖಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ. ಆದರೆ , ಇದುವರೆಗೂ ವರದಿಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದು ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article