
ಲಿವಾ ಮಿಸ್ ದಿವಾ ಯುನಿಸವರ್ಸ್ -2022ರ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿದ ಮಂಗಳೂರು ಮೂಲದ ದಿವಿತಾ ರೈ
Monday, August 29, 2022
ಮುಂಬೈ: ಪ್ರತಿಷ್ಠಿತ ಲಿವಾ ಮಿಸ್ ದಿವಾ ಯುನಿಸವರ್ಸ್ -2022 ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರು ಮೂಲದ ದಿವಿತಾ ರೈ ಕಿರೀಟ ಮುಡಿಗೇರಿಸಿದ್ದಾರೆ . 23 ವರ್ಷದ ದಿವಿತಾ ರೈ 'ಮಿಸ್ ಯುನಿವರ್ಸ್ 2022' ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮುಂಬೈನಲ್ಲಿ ನಡೆದಿರಿವ ವರ್ಣರಂಜಿತ ಸಮಾರಂಭದಲ್ಲಿ 2021ರ ಮಿಸ್ ಯುನಿವರ್ಸ್ ಹರ್ನಾಝ್ ಸಂಧುರವರು ಲಿವಾ ಮಿಸ್ ದಿವಾ - 2022ರ ಕಿರೀಟವನ್ನು ದಿವಿತಾ ರೈಗೆ ತೊಡಿಸಿದರು. ತೆಲಂಗಾಣದ ಪ್ರಜ್ಞಾ ಅಯ್ಯಂಗಾರಿಯವರು ಲಿವಾ ಮಿಸ್ ದಿವಾ ಗೌರವಕ್ಕೆ ಪಾತ್ರರಾದರು . ಮಿಸ್ ಸುಪರ್ ನ್ಯಾಷನಲ್ ಏಷ್ಯಾ 2022ರ ರಿತಿಕಾ ಖತ್ನಾನಿಯವರು ಪ್ರಜ್ಞಾರವರಿಗೆ ಕಿರೀಟ ತೊಡಿಸಿದರು . ಅಪಾರ ಅಭಿಮಾನಿಗಳು ಹಾಗೂ ತಾರಾಬಳಗ ಪಾಲ್ಗೊಂಡಿದ್ದ ಈ ಕಾರ್ಯಕ್ರಮ ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಫೇಮಸ್ ಸ್ಟುಡಿಯೊದಲ್ಲಿ ನಡೆಯಿತು.
ಮಿಸ್ ಯುನಿವರ್ಸ್ 2022ರ ಹರ್ನಾಝ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯುನಿವರ್ಸ್ ಲಾರಾ ದತ್ತಾ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಹರ್ನಾಝ್ ಸಂಧು ಅವರಿಗೆ ಈ ಸಂದರ್ಭ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರಿನಲ್ಲಿ ಜನಿಸಿರುವ ದಿವಿತಾ ರೈಯವರ ತಂದೆ ದಿಲೀಪ್ ರೈ ಹಾಗೂ ತಾಯಿ ಪವಿತ್ರಾ ರೈ. ತಂದೆಯ ಉದ್ಯೋಗದ ನಿಮಿತ್ತ ದಿವಿತಾ ರೈ ಬೇರೆ ಬೇರೆ ಸ್ಥಳಗಳಲ್ಲಿ ಬೆಳೆದಿದ್ದರು. ಸದ್ಯ ಮುಂಬೈನಲ್ಲಿ ನೆಲೆಸಿರುವ ಅವರು ಜೆ.ಜೆ.ಕಾಲೇಜ್ ಆಫ್ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿದ್ದಾರೆ.